×
Ad

ಫೆ.1 ರಿಂದ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಸೀಟುಗಳಿಗೆ ಅವಕಾಶ

Update: 2021-01-31 13:10 IST

ಹೊಸದಿಲ್ಲಿ: ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಶೇ.100 ರಷ್ಟು ಸೀಟುಗಳಿಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಸದ್ಯ ಶೇ.50ರಷ್ಟು ಸೀಟಿಂಗ್‍ಗೆ ಮಾತ್ರ ಅವಕಾಶ ಇದೆ. ಫೆ.1 ಅಂದರೆ ನಾಳೆಯಿಂದಲೇ ಶೇ.100 ಸೀಟಿಂಗ್‍ಗೆ ಅನುಮತಿ ಇದೆ. ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆ ಶನಿವಾರ ಸಂಜೆಯ ನಂತರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ಈ ಅಂಶ ಇದೆ. ಇದರೊಂದಿಗೆ ಚಿತ್ರರಂಗ ನಿರಾಳಗೊಂಡಂತಾಗಿದೆ.

ಕೊರೋನ ವೈರಸ್ ಹರಡುವುದನ್ನು ತಡೆಯಲು ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಸರಕಾರ ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಿಸಿತ್ತು. ಹಲವು ಅಂಗಡಿ-ಮುಗ್ಗಟ್ಟುಗಳಂತೆ ಸುಮಾರು 10,000 ಸಿನಿಮಾ ಥಿಯೇಟರ್ ಗಳನ್ನೂ ಮುಚ್ಚಲಾಗಿತ್ತು. ಕೆಲ ತಿಂಗಳ ಬಳಿಕ ಅನೇಕ ವಾಣಿಜ್ಯ ಚಟುವಟಿಕೆಗಳು ಪುನರಾರಂಭಗೊಂಡಿದ್ದರೂ ಚಿತ್ರಮಂದಿರಗಳಿಗೆ ಬಾಗಿಲು ತೆರೆಯುವ ಅವಕಾಶ ನೀಡಿರಲಿಲ್ಲ. ಅಕ್ಟೋಬರ್ ತಿಂಗಳ ಆರಂಭದಲ್ಲಿ ಶೇ.50ರ ಸೀಟಿಂಗ್ ಸಾಮಥ್ರ್ಯದಲ್ಲಿ ಮಾತ್ರ ಚಿತ್ರಮಂದಿರಗಳಿಗೆ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News