ಕೇಂದ್ರ ಬಜೆಟ್ 2021-22: ಮುಖ್ಯಾಂಶಗಳು
►ಆರೋಗ್ಯ ಕ್ಷೇತ್ರದಲ್ಲಿ ಮಾಡುವ ವೆಚ್ಚದಲ್ಲಿ 137 ಶೇಕಡ, ಅಂದರೆ 2.23 ಲಕ್ಷ ಕೋಟಿ ರೂಪಾಯಿಗೆ ಏರಿಕೆ
►ಎಪ್ರಿಲ್ 1ರಿಂದ ಆರಂಭಗೊಳ್ಳುವ ಆರ್ಥಿಕ ವರ್ಷದಲ್ಲಿ ಕೋವಿಡ್-19 ಲಸಿಕೆಗಾಗಿ 35,000 ಕೋಟಿ ರೂಪಾಯಿ.
►ಮುಂದಿನ ಹಣಕಾಸು ವರ್ಷಕ್ಕೆ ಬಂಡವಾಳ ವೆಚ್ಚದಲ್ಲಿ ತೀವ್ರ ಏರಿಕೆ. ಕಳೆದ ವರ್ಷದ 4.39 ಲಕ್ಷ ಕೋಟಿ ರೂಪಾಯಿಯಿಂದ 5.54 ಲಕ್ಷ ಕೋಟಿ ರೂ.ಗೆ.
►ಪ್ರಸಕ್ತ ಹಣಕಾಸು ವರ್ಷದ ವಿತ್ತೀಯ ಕೊರತೆ ಬಜೆಟ್ ಪ್ರಸ್ತಾಪಿತ 3.5 ಶೇಕಡದಿಂದ 9.5 ಶೇಕಡಕ್ಕೆ ಏರಿಕೆ.
►ಮುಂದಿನ ಹಣಕಾಸು ವರ್ಷದ ವಿತ್ತೀಯ ಕೊರತೆ 6.8 ಶೇಕಡಕ್ಕೆ ನಿಗದಿ. 12 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಲು ಸರಕಾರ ನಿರ್ಧಾರ
►2025-26ರ ವೇಳೆಗೆ ವಿತ್ತೀಯ ಕೊರತೆಯನ್ನು 4.5 ಶೇಕಡಕ್ಕಿಂತ ಕೆಳಗೆ ತರಲು ಯೋಜನೆ
ಹೊಸ ತೆರಿಗೆಗಳು: ಮುಖ್ಯಾಂಶಗಳು
►ಆದಾಯ ತೆರಿಗೆ ವಿವರ ಸಲ್ಲಿಕೆ 75 ವರ್ಷಕ್ಕಿಂತ ಹೆಚ್ಚಿನ ಹಿರಿಯ ನಾಗರಿಕರಿಗೆ ಕಡ್ಡಾಯವಲ್ಲ; ಬ್ಯಾಂಕ್‌ಗಳಿಂದಲೇ ಟಿಡಿಎಸ್ ಕಡಿತ
►ಆದಾಯ ತೆರಿಗೆ ಲೆಕ್ಕಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮರುತೆರೆಯುವ ಕಾಲಮಿತಿ ಅರ್ಧಕ್ಕೆ, ಅಂದರೆ 3 ವರ್ಷಗಳಿಗೆ ಇಳಿಕೆ
►ಆದಾಯ ತೆರಿಗೆ ವಿವರ ಸಲ್ಲಿಸಿದವರ ಸಂಖ್ಯೆ 2014ರಲ್ಲಿದ್ದ 3.31 ಕೋಟಿಗಿಂತ 2020ರಲ್ಲಿ 6.48 ಕೋಟಿಗೆ ಏರಿಕೆ.
►ಚಿನ್ನ, ಬೆಳ್ಳಿ, ಡೋರಿ ಬಾರ್ (ಚಿನ್ನ ಮತ್ತು ಬೆಳ್ಳಿ ಮಿಶ್ರಣದ ಲೋಹ) ಮೇಲೆ 2.5 ಶೇಕಡ ಕೃಷಿ ಮೂಲಸೌಕರ್ಯ ಸೆಸ್; ಸೇಬಿನ ಮೇಲೆ 35 ಶೇಕಡ.
►ಕಾಬೂಲಿ ಕಡಲೆ ಮೇಲೆ 30 ಶೇಕಡ ಕೃಷಿ ಮೂಲಸೌಕರ್ಯ ಸೆಸ್, ಕಡಲೆ ಮೇಲೆ 10 ಶೇಕಡ ಸೆಸ್, ಹುರಿಗಡಲೆ ಮೇಲೆ 50 ಶೇಕಡ ಸೆಸ್, ಅಲಸಂಡೆ ಮೇಲೆ 20 ಶೇಕಡ ಸೆಸ್, ಹತ್ತಿ ಮೇಲೆ 5 ಶೇಕಡ ಸೆಸ್.
►ಪೆಟ್ರೋಲ್ ಮೇಲೆ ಲೀಟರ್‌ಗೆ 2.5 ರೂಪಾಯಿ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 4 ರೂಪಾಯಿ ಕೃಷಿ ಮುಲಸೌಕರ್ಯ ಸೆಸ್.
►ನೂತನ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಫೆಬ್ರವರಿ 2ರಿಂದಲೇ ಜಾರಿ
►ಅವಳಿ ತೆರಿಗೆಯಿಂದಾಗಿ ಎನ್‌ಆರ್‌ಐಗಳು ಎದುರಿಸುತ್ತಿರುವ ಸಂಕಷ್ಟವನ್ನು ದೂರಮಾಡಲು ತೆರಿಗೆ ಇಲಾಖೆಯಿಂದ ಕ್ರಮ
►ಸ್ಟಾರ್ಟಪ್‌ಗಳಿಗೆ ತೆರಿಗೆ ರಜೆ, ಬಂಡವಾಳದ ಮೇಲಿನ ಲಾಭಕ್ಕೆ ತೆರಿಗೆ ವಿನಾಯಿತಿ ಒಂದು ವರ್ಷ ವಿಸ್ತರಣೆ
►ವಿಮಾನ ಲೀಸಿಂಗ್ ಕಂಪೆನಿಗಳಿಗೆ ತೆರಿಗೆ ವಿನಾಯಿತಿ; ವಲಸಿಗ ಕಾರ್ಮಿಕರ ಸರಳ ಮನೆಗಳಿಗೆ ತೆರಿಗೆ ವಿನಾಯಿತಿ
►ಸರಳ ಮನೆಗಳ ಸಾಲದ ಮೇಲಿನ ಬಡ್ಡಿಯ ಮೇಲಿನ 1.5 ಲಕ್ಷ ರೂಪಾಯಿ ತೆರಿಗೆ ಕಡಿತ ಒಂದು ವರ್ಷ ವಿಸ್ತರಣೆ
►ಡಿಜಿಟಲ್ ವಿಧಾನಗಳ ಮೂಲಕ ತಮ್ಮ ಹೆಚ್ಚಿನ ವ್ಯವಹಾರ ನಡೆಸುತ್ತಿರುವ ಕಂಪೆನಿಗಳಿಗೆ ತೆರಿಗೆ ಲೆಕ್ಕಪರಿಶೋಧನೆಯಿಂದ ನೀಡಲಾಗುವ ವಹಿವಾಟು ಮಿತಿ ವಿನಾಯಿತಿ ಎರಡು ಪಟ್ಟು, ಅಂದರೆ 10 ಕೋಟಿ ರೂ.ಗೆ ಏರಿಕೆ
►ಕೆಲವು ವಾಹನ ಭಾಗಗಳು, ಸೌರ ಪರಿಕರಗಳ ಕಸ್ಟಮ್ಸ್ ಸುಂಕ ಹೆಚ್ಚಳ
ಘೋಷಣೆಗಳು, ಸುಧಾರಣೆಗಳು
►ವಿಮಾ ಕ್ಷೇತ್ರದಲ್ಲಿನ ಎಫ್‌ಡಿಐ 49 ಶೇಕಡದಿಂದ 74 ಶೇಕಡಕ್ಕೆ ಏರಿಕೆ
►ಬಂಡವಾಳ ಹಿಂದೆಗೆತ ಗುರಿ 1.75 ಲಕ್ಷ ಕೋಟಿ ರೂ.ಗೆ ನಿಗದಿ
►ಬಿಪಿಸಿಲ್, ಐಡಿಬಿಐ ಬ್ಯಾಂಕ್, ಇನ್ನೂ 2 ಸರಕಾರಿ ಬ್ಯಾಂಕ್‌ಗಳು ಮತ್ತು ಒಂದು ವಿಮಾ ಕಂಪೆನಿಯ ಖಾಸಗೀಕರಣ
►ಸರಕಾರಿ ಬ್ಯಾಂಕ್‌ಗಳಿಗೆ 20,000 ಕೋಟಿ ರೂಪಾಯಿ ಮರು ಬಂಡವಾಳ
►64,180 ಕೋಟಿ ರೂಪಾಯಿ ಯೋಜನಾ ವೆಚ್ಚದೊಂದಿಗೆ ಆತ್ಮನಿರ್ಭರ ಆರೋಗ್ಯ ಕಾರ್ಯಕ್ರಮ
►ಹಳೆಯ ವಾಹನಗಳನ್ನು ಬಳಕೆಯಿಂದ ಸ್ವಯಂಪ್ರೇರಿತವಾಗಿ ದೂರವಿಡುವ ನೀತಿ ಜಾರಿ; 20 ವರ್ಷ ತುಂಬಿದ ವೈಯಕ್ತಿಕ ಬಳಕೆಯ ವಾಹನಗಳಿಗೆ ಕ್ಷಮತೆ ಪರೀಕ್ಷೆ
►ಮುಂಬರುವ ಜನಗಣತಿಗೆ 3,726 ಕೋಟಿ ರೂ. ನಿಗದಿ. ಇದು ಮೊದಲ ಡಿಜಿಟಲ್ ಗಣತಿಯಾಗಿರುತ್ತದೆ.
*************************************************************
►ಮೊಬೈಲ್ ಬಿಡಿಭಾಗಗಳ ದರ ಶೇ.2.5ರಷ್ಟು ಹೆಚ್ಚಳ
►ಪೆಟ್ರೋಲ್, ಡೀಸೆಲ್, ಕಾಬೂಲ್ ಕಡಲೆ, ಸೇಬು, ಮದ್ಯ, ವಾಹನದ ಬಿಡಿಭಾಗ, ಹುರಿಗಡಲೆ, ಹತ್ತಿ ಸೂರ್ಯಕಾಂತಿ ದುಬಾರಿ
►ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆಸ್, ಡೀಸೆಲ್ 4, ಪೆಟ್ರೋಲ್ 2:50 ರೂ. ಏರಿಕೆ
►ಕೆಲವು ಸರಕುಗಳ ಮೇಲೆ ಮೂಲಸೌಕರ್ಯ ಅಭಿವೃದ್ಧಿ ಸೆಸ್
►ಸೋಲಾರ್, ವಾಹನ ಬಿಡಿಭಾಗಗಳು, ಹತ್ತಿ, ರೇಷ್ಮೆ ಮೇಲಿನ ಕಸ್ಟಮ್ ಸುಂಕ ಹೆಚ್ಚಳ.
► ಕೈಗೆಟುಕುವ ಮನೆ ಖರೀದಿಸಲು ಸಿಗುವ 1.5 ಲಕ್ಷ ರೂ. ಸಾಲ ಸೌಲಭ್ಯ ಇನ್ನೂ ಒಂದು ವರ್ಷ ವಿಸ್ತರಣೆ
►ಆದಾಯ ತೆರಿಗೆಯಲ್ಲಿ ಯಾವುದೆ ಬದಲಾವಣೆ ಇಲ್ಲ
►ಕೋವಿಡ್ ಸೆಸ್ ವಿಧಿಸದಿರಲು ನಿರ್ಧಾರ
►ಪಿಂಚಣಿ ಮತ್ತು ಬಡ್ಡಿಯ ರೂಪದ ಆದಾಯ ಮಾತ್ರ ಇರುವ ಹಿರಿಯ ನಾಗರಿಕರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾಗಿಲ್ಲ
►ಜಿಎಸ್ ಟಿಯನ್ನು ಇನ್ನಷ್ಟು ಸರಳೀಕರಿಸಲು ಕ್ರಮ
►5 ಕೋಟಿ ವಹಿವಾಟಿನ ಚಾರಿಟೇಬಲ್ ಟ್ರಸ್ಟ್ ಗೆ ತೆರಿಗೆ ವಿನಾಯಿತಿ
►ಅಸಂಘಟಿತ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ಪೋರ್ಟಲ್ ಆರಂಭಕ್ಕೆ ಚಿಂತನೆ
►ಒಂದೇ ದೇಶ,ಒಂದೇ ರೇಶನ್ ಕಾರ್ಡ್ ಪರಿಕಲ್ಪನೆ ಜಾರಿಗೆ
►ಕನಿಷ್ಠ ಬೆಂಬಲ ಬೆಲೆ ನಿಲ್ಲಿಸಿಲ್ಲ, ಖರೀದಿ ಪ್ರಕ್ರಿಯೆ ಮುಂದುವರಿಕೆ
►ಡಿಜಿಟಲ್ ಪಾವತಿಗಳ ಪ್ರಚಾರಕ್ಕಾಗಿ 1500 ಕೋ.ರೂ.
►ಅಸ್ಸಾಂ ಹಾಗೂ ಬಂಗಾಳದ ಚಹಾ ಕಾರ್ಮಿಕರಿಗೆ 1,500 ಕೋ.ರೂ.
►ಕೃಷಿ ಸಾಲ ಗುರಿಯನ್ನು 16.5 ಲಕ್ಷ ಕೋ.ಗೆ ಹೆಚ್ಚಿಸಲು ವಿತ್ತ ಸಚಿವರ ಪ್ರಸ್ತಾವ
►ಐದು ಪ್ರಮುಖ ಮೀನುಗಾರಿಕೆ ಕೇಂದ್ರಗಳ ಅಭಿವೃದ್ಧಿ ಘೋಷಣೆ
►ರಾಷ್ಟ್ರೀಯ ಶಿಕ್ಷಣ ನೀತಿಯಡಿ 15,000ಕ್ಕೂ ಅಧಿಕ ಶಾಲೆಗಳನ್ನು ಗುಣಾತ್ಮಕವಾಗಿ ಬಲಪಡಿಸಲು ಚಿಂತನೆ
► ಉಚಿತ ಅಡುಗೆ ಅನಿಲ ಎಲ್ ಪಿಜಿ ಉಜ್ವಲ ಯೋಜನೆಯನ್ನು 1 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ವಿಸ್ತರಣೆ
► ಹಣಕಾಸು ಸಂಸ್ಥೆಗಳ ಅಭಿವೃದ್ದಿಗೆ 20,000 ಕೋ.ರೂ.
► 2021-22ರಲ್ಲಿ ಎಲ್ ಐಸಿಯಲ್ಲಿ ಐಪಿಒ, ಇದಕ್ಕಾಗಿ ಅಗತ್ಯ ತಿದ್ದುಪಡಿ.
►ರೈಲ್ವೆಗಾಗಿ 1,10,055 ಕೋ.ರೂ.ದಾಖಲೆ ಹಣ
►4,378 ನಗರ ಸ್ಥಳೀಯ ಸಂಸ್ಥೆಗಳಿಗೆ 2.87 ಲಕ್ಷ ಕೋಟಿ.ರೂ. ವಿನಿಯೋಗದೊಂದಿಗೆ 'ಜಲ್ ಜೀವನ್ ಮಿಷನ್' ಘೋಷಣೆ
► ಪಿಎಂ ಆತ್ಮನಿರ್ಭರ್ ಸ್ವಸ್ತ್ ಭಾರತ್ ಯೋಜನೆಯು 6 ವರ್ಷಗಳಲ್ಲಿ ಸುಮಾರು 64,180 ಕೋಟಿಗಳಷ್ಟು ವಿನಿಯೋಗದೊಂದಿಗೆ ಪ್ರಾರಂಭ: ನಿರ್ಮಲಾ ಸೀತಾರಾಮನ್.
► ರೈಲ್ವೇಗೆ 1.10 ಲಕ್ಷ ಕೋಟಿ ರೂ. ವಿನಿಯೋಗದ ಘೋಷಣೆ. ಇದರಲ್ಲಿ 1.7 ಲಕ್ಷ ಕೋ.ರೂ. ಬಂಡವಾಳ ವೆಚ್ಚವಾಗಿರುತ್ತದೆ.
►ಬೆಂಗಳೂರು ಮೆಟ್ರೋಗೆ 14 ಸಾವಿರ ಕೋ.ರೂ. ಅನುದಾನ
ಬೆಂಗಳೂರಿನಲ್ಲಿ 58 ಕಿ.ಮೀ. ಹೊಸ ಮೆಟ್ರೋ ರೈಲು ಮಾರ್ಗಕ್ಕೆ 14,778 ಕೋ.ರೂ. ಅನುದಾನ ಘೋಷಣೆ
► ಜಮ್ಮು-ಕಾಶ್ಮೀರದಲ್ಲಿ ಗ್ಯಾಸ್ ಪೈಪ್ ಲೈನ್ ಯೋಜನೆ
► ಮುಂದಿನ 3 ವರ್ಷಗಳಲ್ಲಿ ಇನ್ನೂ 100 ನಗರಗಳನ್ನು ಅನಿಲ ವಿತರಣಾ ಜಾಲಕ್ಕೆ ಸೇರ್ಪಡೆ ಮಾಡಲಾಗುವುದು.
►ಸರಕಾರಿ ಬಸ್ ಗಳಿಗೆ ಕೇಂದ್ರ ಸರಕಾರದಿಂದ 18,000 ಕೋ.ರೂ ನೆರವು
►ವಿದ್ಯುತ್ ಕ್ಷೇತ್ರಕ್ಕೆ 3.05 ಲಕ್ಷ ಕೋಟಿ ರೂ. ವಿನಿಯೋಗ
►ಜವಳಿ ಉದ್ಯಮಕ್ಕೆ ಮೆಗಾ ಜವಳಿ ಪಾರ್ಕ್ ಯೋಜನೆ ಘೋಷಣೆ
►17,000 ಗ್ರಾಮೀಣ ಆರೋಗ್ಯ ಕೇಂದ್ರಗಳ ಸ್ಥಾಪನೆ
►ತಮಿಳುನಾಡು, ಕೇರಳ, ಪಶ್ಚಿಮಬಂಗಾಳ ಹಾಗೂ ಅಸ್ಸಾಂ ನಲ್ಲಿ ಹೆದ್ದಾರಿಗಳ ಯೋಜನೆ ಘೋಷಣೆ
►ಪಶ‍್ಚಿಮಬಂಗಾಳದಲ್ಲಿ 25,000 ಕೋ.ರೂ. ವೆಚ್ಚದ 675 ಕಿ.ಮೀ.ಹೆದ್ದಾರಿ ಕಾಮಗಾರಿ ಘೋಷಣೆ
*ಮೂಲಸೌಕರ್ಯ ಪೈಪ್ ಲೈನ್ ಯೋಜನೆ ಅಡಿ 1 ಲಕ್ಷ ಕೋಟಿ ಮೊತ್ತದ 217 ಯೋಜನೆಗಳು ಪೂರ್ಣಗೊಂಡಿವೆ.
*ಕೋವಿಡ್-19 ಲಸಿಕೆಗಳಿಗೆ 35,000 ಕೋಟಿ ರೂ. ಘೋಷಣೆ
* ದೇಶದ ಮೇಲೆ ಪರಿಣಾಮಬೀರುವ ವಿಪತ್ತುಗಳ ದೃಷ್ಟಿಯಿಂದ ಈ ಬಜೆಟ್ ಅನ್ನು ಹಿಂದೆಂದೂ ಕಂಡು ಕೇಳರಿಯದಂಥ, ವಿಶೇಷ ಸನ್ನಿವೇಶದಲ್ಲಿ ಸಿದ್ಧಪಡಿಸಲಾಗಿದೆ ಎಂದ ನಿರ್ಮಲಾ ಸೀತಾರಾಮನ್
* ಬಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ. ಇನ್ನುಕೆಲವೆ ಕ್ಷಣಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರನೇ ಬಾರಿ ಬಜೆಟ್ ಮಂಡಿಸಲಿದ್ದಾರೆ.
*ಕೋವಿಡ್-19 ಕಾರಣದಿಂದಾಗಿ ಇದೇ ಮೊದಲ ಬಾರಿ ಬಜೆಟ್ ಅನ್ನು ಕಾಗದರಹಿತವಾಗಿ ಮಂಡಿಸಲಾಗುತ್ತಿದೆ. ಬಜೆಟ್ ಪ್ರತಿ ಆನ್ ಲೈನ್ ನಲ್ಲಿ ಹಾಗೂ ಆ್ಯಪ್ ನಲ್ಲಿ ಲಭ್ಯವಾಗಲಿದೆ.
* ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಾಂಗ್ರೆಸ್ ಸಂಸದರಾದ ಜಸ್ಬೀರ್ ಸಿಂಗ್ ಗಿಲ್ ಹಾಗೂ ಗುರ್ಜೀತ್ ಸಿಂಗ್ ಕಪ್ಪು ನಿಲುವಂಗಿ ಧರಿಸಿ ಸಂಸತ್ತಿನೊಳಗೆ ಪ್ರವೇಶಿಸಿದರು