ರೈತರು ದಿಲ್ಲಿಗೆ ತಲುಪದಂತೆ ರೈಲನ್ನು ಬೇರೆ ಕಡೆಗೆ ತಿರುಗಿಸಿದರು: ಯೋಗೇಂದ್ರ ಯಾದವ್ ಆರೋಪ

Update: 2021-02-01 06:03 GMT

ಹೊಸದಿಲ್ಲಿ, ಫೆ.1 : ದಿಲ್ಲಿಗೆ ಪ್ರತಿಭಟನಾನಿರತ ರೈತರನ್ನು ಸೇರಿಕೊಳ್ಳಲು ಬರುತ್ತಿದ್ದ ರೈಲೊಂದನ್ನು ತಿರುಗಿಸಿ ಬೇರೆ ಕಡೆಗೆ ಕಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ರೈತ ಚಳವಳಿಯ ಪ್ರಮುಖ ಮುಖಂಡರಲ್ಲೊಬ್ಬರಾದ ಯೋಗೇಂದ್ರ ಯಾದವ್ ಈ ಬಗ್ಗೆ ಸೋಮವಾರ ಬೆಳಗ್ಗೆ ಟ್ವೀಟ್ ಹಾಗು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. 

ಫೆರೋಜ್ ಪುರ ಮುಂಬೈ ಪಂಜಾಬ್ ಮೈಲ್ ರೈಲನ್ನು ರೋಹಟಕ್ ನಿಂದ ರೇವಾರಿಗೆ ಸೋಮವಾರ ಬೆಳಗ್ಗೆ ತಿರುಗಿಸಲಾಗಿದೆ. ಅದರಲ್ಲಿದ್ದ ಸುಮಾರು ಒಂದು ಸಾವಿರ ರೈತರು ದಿಲ್ಲಿಗೆ ತಲುಪದಂತೆ ಮಾಡಲು ಹೀಗೆ ಮಾಡಲಾಗಿದೆ ಎಂದು ಯಾದವ್ ಆರೋಪಿಸಿದ್ದಾರೆ. 
ಅವರ ಫೇಸ್ ಬುಕ್ ಪೋಸ್ಟ್ ಇಲ್ಲಿದೆ :

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News