ಹಳೆ ವಾಹನ ಬಿಡಲು ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿ ಘೋಷಿಸಿದ ನಿರ್ಮಲಾ ಸೀತಾರಾಮನ್

Update: 2021-02-01 08:12 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಹಳೆಯ ಹಾಗೂ ಉತ್ತಮ ಸ್ಥಿತಿಯಲ್ಲಿಲ್ಲದ ವಾಹನಗಳನ್ನು ರಸ್ತೆಗಳಿಂದ ಹೊರಗಿಡುವಂತಾಗಲು ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಇಂದು ಕೇಂದ್ರ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಖಾಸಗಿ ವಾಹನಗಳು 20 ವರ್ಷಗಳ ಅವಧಿಯ ನಂತರ  ಹಾಗೂ ವಾಣಿಜ್ಯ ವಾಹನಗಳು 15 ವರ್ಷಗಳ ನಂತರ ಸ್ವಯಂಚಾಲಿತ ಫಿಟ್ನೆಸ್ ಕೇಂದ್ರಗಳಲ್ಲಿ ಫಿಟ್ನೆಸ್ ಪರೀಕ್ಷೆಗೊಳಗಾಗಬೇಕಿದೆ ಎಂದು ಸಚಿವೆ ಹೇಳಿದರು.

ಹಳೆಯ ವಾಹನಗಳ ಸ್ಕ್ರ್ಯಾಪಿಂಗ್ ನೀತಿಯಿಂದಾಗಿ ರಸ್ತೆಗಳಲ್ಲಿ ಕಡಿಮೆ ಇಂಧನ ಬಳಸುವ ಹಾಗೂ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಹೆಚ್ಚು ಉತ್ತೇಜನ ದೊರಕಿದಂತಾಗುವುದಲ್ಲದೆ ಇದು ಮಾಲಿನ್ಯವನ್ನೂ ಕಡಿಮೆಗೊಳಿಸಿ ದೇಶದ ತೈಲ ಆಮದು  ವೆಚ್ಚವನ್ನೂ ಕಡಿತಗೊಳಿಸಲಿದೆ ಎಂದು ಸಚಿವೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News