×
Ad

ಪೆಟ್ರೋಲ್ ಗೆ 2.50 ರೂ., ಡೀಸಲ್ ಗೆ 4 ರೂ.ಕೃಷಿ ಸೆಸ್ ವಿಧಿಸಿದ ಕೇಂದ್ರ ಸರಕಾರ

Update: 2021-02-01 14:06 IST

ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಮಂಡನೆಯ ವೇಳೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೃಷಿ ಮೂಲಭೂತ ಸೌಕರ್ಯ  ಹಾಗೂ ಅಭಿವೃದ್ದಿ ಸೆಸ್ (ಎಐಡಿಸಿ) ಅನ್ನು ವಿಧಿಸುವ ಪ್ರಸ್ತಾವ ಮುಂದಿಟ್ಟಿದ್ದಾರೆ. ಪೆಟ್ರೋಲ್ ಮೇಲೆ ಲೀಟರ್ ಗೆ 2.50 ರೂ. ಹಾಗೂ ಡೀಸೆಲ್ ಮೇಲೆ 4 ರೂ. ಕೃಷಿ ಸೆಸ್ ವಿಧಿಸಲಾಗುತ್ತದೆ.

ಈ ಸೆಸ್ ಫೆಬ್ರವರಿ 2ರಿಂದಲೇ  ಅನ್ವಯವಾಗಲಿದೆ.

ಇಂತಹ ಸೆಸ್ ಗ್ರಾಹಕರ ಮೇಲೆ ಯಾವುದೆ ಪರಿಣಾಮಬೀರದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಪಟ್ರೋಲ್ ಹಾಗೂ ಡೀಸೆಲ್ ಮೇಲೆ ಕೃಷಿ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ದಿ ಸೆಸ್ ವಿಧಿಸುತ್ತಿರುವ ಪರಿಣಾಮವಾಗಿ ಮೂಲ ಅಬಕಾರಿ ಸುಂಕ(ಬಿಇಡಿ) ಹಾಗೂ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ(ಎಸ್ ಎಇಡಿ)ದರಗಳು ಇಳಿಕೆಯಾಗುತ್ತವೆ. ಒಟ್ಟಾರೆ ಇದು ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಹೊರೆಯಾಗದು ಎಂದು ನಿರ್ಮಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News