×
Ad

ಎನ್ನಾರೈಗಳಿಗೆ ಇಮ್ಮಡಿ ತೆರಿಗೆಯಿಂದ ವಿನಾಯಿತಿ

Update: 2021-02-01 14:13 IST

ಹೊಸದಿಲ್ಲಿ,ಫೆ.1: ಸೋಮವಾರ ಸಂಸತ್ತಿನಲ್ಲಿ 2021ನೇ ಸಾಲಿನ ಮುಂಗಡಪತ್ರವನ್ನು ಮಂಡಿಸಿದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನಿವಾಸಿ ಭಾರತೀಯ (ಎನ್ನಾರೈ)ರಿಗೆ ಇಮ್ಮಡಿ ತೆರಿಗೆಯಿಂದ ವಿನಾಯಿತಿಯನ್ನು ಘೋಷಿಸಿದ್ದಾರೆ. ಇದಕ್ಕಾಗಿ ಹೊಸ ನಿಯಮಾವಳಿಗಳನ್ನು ಅಧಿಸೂಚಿಸಲಾಗುವುದು ಮತ್ತು ತೆರಿಗೆ ಆಡಿಟ್ ಮಿತಿಯನ್ನು 5 ಕೋ.ರೂ.ಗಳಿಂದ 10 ಕೋ.ರೂ.ಗಳಿಗೆ ಹೆಚ್ಚಿಸಲಾಗಿದೆ.

ಕೇವಲ ಪಿಂಚಣಿ ಮತ್ತು ಬಡ್ಡಿ ಆದಾಯವನ್ನು ಹೊಂದಿರುವ ಹಿರಿಯ ನಾಗರಿಕರು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದಕ್ಕೆ ವಿನಾಯಿತಿ ನೀಡಲಾಗಿದೆ.

ಗಂಭೀರ ತೆರಿಗೆ ವಂಚನೆ ಪ್ರಕರಣಗಳಲ್ಲಿ ವರ್ಷವೊಂದರಲ್ಲಿ 50 ಲ.ರೂ.ಅಥವಾ ಹೆಚ್ಚಿನ ಆದಾಯವನ್ನು ಬಚ್ಚಿಟ್ಟಿದ್ದಕ್ಕೆ ಸಾಕ್ಷಾಧಾರಗಳು ಕಂಡುಬಂದರೆ ಮಾತ್ರ 10 ವರ್ಷಗಳ ಅವಧಿಗೆ ಮಾತ್ರ ಮರು ತೆರಿಗೆ ಮೌಲ್ಯಮಾಪನವನ್ನು ನಡೆಸಲಾಗುವುದು. ಇತರರಿಗೆ ಮರುತೆರಿಗೆ ವೌಲ್ಯಮಾಪನದ ಅವಧಿ ಕೇವಲ ಮೂರು ವರ್ಷಗಳಾಗಿರುತ್ತವೆ ಎಂದು ಸೀತಾರಾಮನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News