ದೇಶದ ಸಂಪತ್ತನ್ನು ಬಂಡವಾಳಶಾಹಿ ಮಿತ್ರರಿಗೆ ನೀಡಲು ಮೋದಿ ಯೋಜನೆ: ರಾಹುಲ್ ಗಾಂಧಿ
ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿರುವ ಬಜೆಟ್ ಕುರಿತಂತೆ ಮೊದಲಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದ ಆಸ್ತಿಯನ್ನು ಬಂಡವಾಳಶಾಹಿ ಉದ್ಯಮ ಮಿತ್ರರಿಗೆ ಹಸ್ತಾಂತರಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಹುನ್ನಾರವಾಗಿದೆ ಎಂದು ಟೀಕಿಸಿದರು.
ಈ ಕುರಿತು ಟ್ವೀಟಿಸಿರುವ ರಾಹುಲ್, ಜನರ ಕೈಗಳಿಗೆ ಹಣವನ್ನು ನೀಡುವುದು ಮರೆತು ಬಿಡಿ. ನರೇಂದ್ರ ಮೋದಿ ಸರಕಾರ ಭಾರತದ ಸಂಪತ್ತನ್ನು ತನ್ನ ನಿಕಟ ಬಂಡವಾಳಶಾಹಿ ಉದ್ಯಮ ಗೆಳೆಯರಿಗೆ ಹಸ್ತಾಂತರಿಸುವ ಯೋಜನೆ ಹಾಕಿಕೊಂಡಿದೆ ಎಂದು ಆರೋಪಿಸಿದರು.
ಕಿರು, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ವಲಯಗಳು (ಎಂಎಸ್ ಎಂ ಇ) ಸೇರಿದಂತೆ ಸರಕಾರ ತನ್ನ ಬಜೆಟ್ ನಲ್ಲಿ ಗಮನ ಹರಿಸಬೇಕಾಗಿದ್ದ ವಲಯಗಳನ್ನು ಎತ್ತಿ ತೋರಿಸಿದ ರಾಹುಲ್ ಗಾಂಧಿ, ದೇಶದ ರೈತರು ಹಾಗೂ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವ ಅಗತ್ಯತೆ ಹಾಗೂ ಆರೋಗ್ಯ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ವೆಚ್ಚವನ್ನು ಹೆಚ್ಚಿಸುವ ಅಗತ್ಯತೆ ಬಗ್ಗೆಯೂ ಆಗ್ರಹಿಸಿದರು.
Forget putting cash in the hands of people, Modi Govt plans to handover India's assets to his crony capitalist friends.#Budget2021
— Rahul Gandhi (@RahulGandhi) February 1, 2021