×
Ad

ಪತ್ರಕರ್ತೆ ರೋಹಿಣಿ ಸಿಂಗ್ ಗೆ ಕೊಲೆ, ಅತ್ಯಾಚಾರದ ಬೆದರಿಕೆ: ಕಾನೂನು ವಿದ್ಯಾರ್ಥಿ ಬಂಧನ

Update: 2021-02-01 18:11 IST

ಜೈಪುರ: ಪತ್ರಕರ್ತೆ ರೋಹಿಣಿ ಸಿಂಗ್ ಗೆ ಕೊಲೆ ಹಾಗೂ ಅತ್ಯಾಚಾರದ ಬೆದರಿಕೆ ಒಡ್ಡಿದ ಆರೋಪದಲ್ಲಿ ರಾಜಸ್ಥಾನದ ಉದಯಪುರದ ಕಾನೂನು ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ.

26ರ ವಯಸ್ಸಿನ ಕಪಿಲ್ ವಿಜಯನ್ ಎಂಬಾತನನ್ನು ಜನವರಿ 30ರಂದು ಬಂಧಿಸಲಾಗಿದೆ.

ಗಣರಾಜ್ಯೋತ್ಸವದಂದು ಪ್ರತಿಭಟನಾನಿರತ ರೈತರು ನಡೆಸಿದ್ದ ಟ್ರ್ಯಾಕ್ಟರ್ ರ್ಯಾಲಿಯ ಕುರಿತ ಟ್ವೀಟಿಗೆ ರೋಹಿಣಿ ಸಿಂಗ್ ಪ್ರತಿಕ್ರಿಯೆ ನೀಡಿದ ಬಳಿಕ ಕಪಿಲ್ ವಿಜಯನ್, ಪತ್ರಕರ್ತೆ ಗೆ ಬೆದರಿಕೆ ಒಡ್ಡಿದ್ದ. ಬೆದರಿಕೆಯ ಟ್ವೀಟನ್ನು ಉದಯಪುರ ಪೊಲೀಸ್ ಹಾಗೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗೆ ಟ್ಯಾಗ್ ಮಾಡಿದ್ದ ರೋಹಿಣಿ ಬೆದರಿಕೆ ವಿಚಾರವನ್ನು ಬಹಿರಂಗಪಡಿಸಿದ್ದಲ್ಲದೆ, ಬೆದರಿಕೆ ಒಡ್ಡಿದವನ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ದಿಲ್ಲಿಯ ಗಡಿಗಳಲ್ಲಿ ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯ ಕುರಿತು ಪತ್ರಕರ್ತೆಯ ವರದಿಗಾರಿಕೆಯ ಶೈಲಿಗೆ ಸಿಟ್ಟಾಗಿ ಈ ಬೆದರಿಕೆ ಒಡ್ಡಿದ್ದಾಗಿ ಆರೋಪಿ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಉದಯಪುರ ಇನ್ಸ್ ಪೆಕ್ಟರ್ ಜನರಲ್  ಸತ್ಯವೀರ್ ಸಿಂಗ್ ‘ಹಿಂದೂಸ್ತಾನ್ ಟೈಮ್ಸ್’ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News