×
Ad

ಕೇಂದ್ರ ಬಜೆಟ್‌: ಮತದಾನ ಉಪಕರಣಗಳ ಖರೀದಿಗೆ ರೂ. 1,005 ಕೋಟಿ ಮೀಸಲು

Update: 2021-02-01 18:34 IST

ಹೊಸದಿಲ್ಲಿ: ವಿದ್ಯುನ್ಮಾನ ಮತ ಯಂತ್ರ ಅಥವಾ ಇವಿಎಂಗಳಿಗೆ ಅಗತ್ಯವಿರುವ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್, ವಿವಿಪ್ಯಾಟ್ ಖರೀದಿಸಲು ಹಾಗೂ ಹಳೆಯ ಮತಯಂತ್ರಗಳನ್ನು ನಾಶಪಡಿಸಲು ಚುನಾವಣಾ ಆಯೋಗಕ್ಕೆ ಒದಗಿಸುವ ಸಲುವಾಗಿ ಕೇಂದ್ರ ಬಜೆಟಿನಲ್ಲಿ ಕಾನೂನು ಸಚಿವಾಲಯಕ್ಕೆ ರೂ. 1,005 ಕೋಟಿ ನಿಧಿ ಮೀಸಲಿರಿಸಲಾಗಿದೆ. ಸಾಮಾನ್ಯವಾಗಿ ಒಂದು ಇವಿಎಂ ಬಾಳ್ವಿಕೆ 15 ವರ್ಷಗಳಾಗಿದ್ದು, ಕಾರ್ಯಾಚರಿಸದೇ ಇರುವ ಇವಿಎಂಗಳನ್ನು ನಂತರ ತಜ್ಞರ ಮಾರ್ಗದರ್ಶನದಲ್ಲಿ ನಾಶಪಡಿಸಲಾಗುತ್ತದೆ.

ಮತದಾರರ ಭಾವಚಿತ್ರಗಳಿರುವ ಐಡಿಗಳಿಗಾಗಿ ಬಜೆಟ್‍ನಲ್ಲಿ  ರೂ. 7.20 ಕೋಟಿ ಮೀಸಲಿರಿಸಲಾಗಿದೆ. ರಾಜ್ಯ ಸರಕಾರಗಳು ಮತದಾರರ ಗುರುತು ಪತ್ರಕ್ಕಾಗಿ ವ್ಯಯಿಸುವ ವೆಚ್ಚದಲ್ಲಿ ಕೇಂದ್ರದ ಪಾಲು ನೀಡಲು ಈ ಹಣ ಬಳಸಲಾಗುವುದು.

ಚುನಾವಣಾ ವೆಚ್ಚ ಹಾಗೂ ಮತದಾರರ ಪಟ್ಟಿ ಮುದ್ರಿಸಲು ರಾಜ್ಯ ಸರಕಾರಗಳ ಖರ್ಚಿನಲ್ಲಿ ಕೇಂದ್ರದ ಪಾಲು ನೀಡಲು ರೂ. 57.10 ಕೋಟಿ ಮೀಸಲಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News