ನಾವು ಖರ್ಚು ಮಾಡಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದೇಕೆ ?
Update: 2021-02-02 00:01 IST
ಹೊಸದಿಲ್ಲಿ, ಫೆ.1: ‘ದೇಶದ ವಿತ್ತೀಯ ಕೊರತೆ 2020ರ ಫೆಬ್ರವರಿಯಲ್ಲಿ 3.5% ಆಗಿತ್ತು ಮತ್ತು ಈಗ ಜಿಡಿಪಿಯ 9.5%ಕ್ಕೆ ತಲುಪಿದೆ. ಇದರ ಅರ್ಥ ನಾವು ಖರ್ಚು ಮಾಡಿದ್ದೇವೆ, ನಾವು ಖರ್ಚು ಮಾಡಿದ್ದೇವೆ. ಇದೇ ವೇಳೆ, ವಿತ್ತೀಯ ಕೊರತೆ ನಿರ್ವಹಣೆಯ ಬಗ್ಗೆ ಸ್ಪಷ್ಟ ಮಾರ್ಗಸೂಚಿಯನ್ನೂ ಹಾಕಿಕೊಟ್ಟಿದ್ದೇವೆ ’ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅತ್ಯಂತ ಕಿರು ಅವಧಿಯ ಬಜೆಟ್ ಭಾಷಣ ಮಾಡಿದ ಸಚಿವೆ, ಆರ್ಥಿಕ ಕ್ಷೇತ್ರದ ಪುನಶ್ಚೇತನಕ್ಕೆ ನಾವು ಪ್ರಗತಿಪರ ಕ್ರಮಗಳನ್ನು ಕೈಗೊಂಡಿದ್ದೇವೆ. ಕೃಷಿ ಸೆಸ್ ವಿಧಿಸಿದ್ದರೂ ಗ್ರಾಹಕರು ಯಾವುದೇ ಉತ್ಪನ್ನಗಳ ಮೇಲೆ ಹೆಚ್ಚುವರಿ ಮೊತ್ತ ಪಾವತಿಸಬೇಕಿಲ್ಲ ಎಂದರು.
ಎಂಎಸ್‌ಎಂಇ ಕ್ಷೇತ್ರದ ವ್ಯಾಖ್ಯಾನವನ್ನು ಸರಕಾರ ಬದಲಿಸಿದ್ದು ಸಣ್ಣ ಉದ್ದಿಮೆದಾರರ ಮೇಲಿನ ಹೊರೆಯನ್ನು ಕಡಿಮೆಗೊಳಿಸಿದೆ. ಉದ್ಯೋಗ ಸೃಷ್ಟಿಸಲು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದವರು ಹೇಳಿದ್ದಾರೆ.