ಕೇರಳ: ಎಂಟರ ಹರೆಯದ ಬಾಲಕನಿಗೆ ಕಾದ ಸಟ್ಟುಗದಿಂದ ಬರೆ ಹಾಕಿದ ತಂದೆ
Update: 2021-02-02 20:37 IST
ಅಡೂರು,ಫೆ.2: ಓದುತ್ತಿಲ್ಲವೆಂಬ ಕಾರಣಕ್ಕೆ ಎಂಟರ ಹರೆಯದ ಬಾಲಕನಿಗೆ ಹೆತ್ತ ತಂದೆಯೇ ಕಾದ ಸಟ್ಟುಗದಿಂದ ಬರೆ ಹಾಕಿದ ಆಘಾತಕಾರಿ ಘಟನೆ ಇಲ್ಲಿ ನಡೆದಿದೆ. ಜ.30ರಂದು ಈ ಘಟನೆ ನಡೆದಿದ್ದು, ಪಂಚಾಯತ್ ಸದಸ್ಯನೋರ್ವ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಬೆಳಕಿಗೆ ಬಂದಿದೆ.
ಬಾಲಕನ ತಂದೆ ಶ್ರೀಕುಮಾರ (31) ಮದ್ಯಪಾನದ ಚಟವನ್ನು ಹೊಂದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ತೋಳುಗಳು ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿರುವ ಬಾಲಕನನ್ನು ಪಟ್ಟಣಂತಿಟ್ಟ ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.