×
Ad

ಕ್ರಿಕೆಟರ್ ಗಳಿಂದ ಟ್ವೀಟ್ ಮಾಡಿಸುವುದು ನೀವು ದೇಶಕ್ಕೆ ಮಾಡಿರುವ ಹಾನಿಗೆ ಪರಿಹಾರವಲ್ಲ : ಶಶಿ ತರೂರ್

Update: 2021-02-04 11:56 IST

ಹೊಸದಿಲ್ಲಿ: ಭಾರತದಲ್ಲಿ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಖ್ಯಾತ ಪಾಪ್ ಗಾಯಕಿ ರಿಹಾನ್ನಾ, ಪರಿಸರ ಹೋರಾಟಗಾರ್ತಿ ಗ್ರೆಟಾ ಥೆನ್ಬರ್ಗ್ ಸಹಿತ ಹಲವು ಅಂತಾರಾಷ್ಟ್ರೀಯ ಖ್ಯಾತನಾಮರು ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರು. ಬಳಿಕ ಕೇಂದ್ರ ಸರಕಾರ ಹೊರಡಿಸಿದ್ದ ಪ್ರಕಟನೆಯನ್ನು ಬೆಂಬಲಿಸಿ ಭಾರತೀಯ ಗಣ್ಯರು ಕೂಡಾ ಟ್ವೀಟ್ ಮಾಡಿದ್ದರು.

ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ, ಸುರೇಶ್ ರೈನಾ ಹಾಗೂ ಬಾಲಿವುಡ್ ನ ಹಲವಾರು ಮಂದಿ ಟ್ವೀಟ್ ಮಾಡಿದ್ದರು. ಇದೀಗ ಈ ಕುರಿತು ಕಾಂಗ್ರೆಸ್ ಮುಖಂಡ, ಸಂಸದ ಶಶಿ ತರೂರ್ "ಕ್ರಿಕೆಟಿಗರಿಂದ ನಿಮ್ಮ ಪರವಾಗಿ ಟ್ವೀಟ್ ಮಾಡಿಸಿ ಕೂಡಲೇ ಭಾರತಕ್ಕೆ ನೀವು ಮಾಡಿರುವ ಹಾನಿ ಮುಚ್ಚಿ ಹೋಗುವುದಿಲ್ಲ" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

"ಭಾರತದ ಗಣ್ಯರನ್ನು ವಿದೇಶಿ ಸೆಲೆಬ್ರಿಟಿಗಳ ಟ್ವೀಟ್ ಗೆ ಪ್ರತಿಕ್ರಿಯೆ ನೀಡುವಂತೆ ಮಾಡುತ್ತಿರುವ ಸರಕಾರದ ನಡೆಯು ಮುಜುಗರ ಸೃಷ್ಟಿಸುತ್ತಿದೆ. ವಿಶ್ವದಲ್ಲಿ ಭಾರತಕ್ಕೆ ಇರುವ ಮನ್ನಣೆಗೆ ನೀವು ಮಾಡಿರುವ ಹಾನಿಗೆ ಕ್ರಿಕೆಟರ್ ಗಳ ಅಥವಾ ಸೆಲೆಬ್ರಿಟಿಗಳು ಮಾಡುವ ಟ್ವೀಟ್ ಪರಿಹಾರವಲ್ಲ. ಈ ಎಲ್ಲಾ ತೊಂದರೆಗಳಿಗಿರುವ ಪರಿಹಾರವೆಂದರೆ ಕೃಷಿ ಕಾಯ್ದೆಯನ್ನು ಹಿಂಪಡೆದು ರೈತರೊಂದಿಗೆ ಮಾತುಕತೆ ನಡೆಸುವುದು ಎಂದು ತರೂರ್ ಟ್ವಿಟರ್ ನಲ್ಲಿ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News