"ಪ್ರತಿಭಟನೆಯಲ್ಲಿ ಭಾಗವಹಿಸುವವರು, ರಸ್ತೆ ತಡೆ ನಡೆಸುವವರಿಗೆ ಸರಕಾರಿ ನೌಕರಿಯಿಲ್ಲ"

Update: 2021-02-04 07:34 GMT
ಸಾಂದರ್ಭಿಕ ಚಿತ್ರ

ಪಾಟ್ನ: ಹಿಂಸಾತ್ಮಕ ಪ್ರತಿಭಟನೆಗಳನ್ನು ಆಯೋಜಿಸುವವರು, ಧರಣಿಗಳಲ್ಲಿ ಭಾಗವಹಿಸುವವರು ಅಥವಾ ರಸ್ತೆ ತಡೆ ನಡೆಸುವವರಿಗೆ ಯಾವುದೇ ಸರಕಾರಿ ಉದ್ಯೋಗ ದೊರೆಯುವುದಿಲ್ಲ ಅಥವಾ ಯಾವುದೇ ವಿಧದ ಸರಕಾರಿ ಗುತ್ತಿಗೆಯೂ ದೊರಕುವುದಿಲ್ಲ ಎಂದು ಬಿಹಾರ ಪೊಲೀಸರು ಹೊರಡಿಸಿರುವ ವಿವಾದಾತ್ಮಕ ಸುತ್ತೋಲೆ ಆಕ್ರೋಶ ಮೂಡಿಸಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹಿಟ್ಲರ್, ಮುಸ್ಸೊಲಿನಿಯಂತೆ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆಂದು ವಿಪಕ್ಷ ಆರ್.ಜೆ.ಡಿ ಆರೋಪಿಸಿದೆ.

ಹಿಂಸೆಗೆ ತಿರುಗಬಹುದಾದ ಯಾವುದೇ ಪ್ರತಿಭಟನೆಯಲ್ಲಿ ಯಾರಾದರೂ ಭಾಗವಹಿಸಿದ್ದಲ್ಲಿ ಅವರ ವ್ಯಕ್ತಿತ್ವ ಪ್ರಮಾಣ ಪತ್ರದಲ್ಲಿ ಅದನ್ನು ಉಲ್ಲೇಖಿಸಲಾಗುವುದು ಎಂದು ಬಿಹಾರ ಡಿಜಿಪಿ ಎಸ್ ಕೆ ಸಿಂಘಾಲ್ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ. "ರಾಜ್ಯ ಸರಕಾರಿ ಒಡೆತನದ ಮದ್ಯದಂಗಡಿ ತೆರೆಯಲು, ಸರಕಾರಿ ನೌಕರಿ ಗಿಟ್ಟಿಸಲು ಅಥವಾ ಬಂದೂಕು ಪರವಾನಗಿ  ಹಾಗೂ ಪಾಸ್‍ಪೋರ್ಟ್ ಪಡೆಯಲು ಪೊಲೀಸ್ ವೆರಿಫಿಕೇಶನ್ ಅಗತ್ಯ. ಯಾವುದೇ ವ್ಯಕ್ತಿ ಪ್ರತಿಭಟನೆ, ರಸ್ತೆ ತಡೆಗಳಲ್ಲಿ ಭಾಗವಹಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಲ್ಲಿ ಹಾಗೂ ಪೊಲೀಸ್ ಪ್ರಕರಣ ಎದುರಿಸಿದಲ್ಲಿ ಅದನ್ನು ಪ್ರಮಾಣಪತ್ರದಲ್ಲಿ ನಮೂದಿಸಲಾಗುವುದು ಹಾಗೂ ಅವರಿಗೆ ಸರಕಾರಿ ನೌಕರಿ ಅಥವಾ ಸರಕಾರಿ ಒಡೆತನದ ಮದ್ಯದಂಗಡಿ ತೆರೆಯಲು ಅನುಮತಿಸಲಾಗುವುದಿಲ್ಲ" ಎಂದು ಸುತ್ತೋಲೆ ತಿಳಿಸಿದೆ.

ಈ ಕುರಿತು ಟ್ವೀಟ್ ಮಾಡಿದ ಆರ್.ಜೆ.ಡಿ ನಾಯಕ ತೇಜಸ್ವಿ ಯಾದವ್, ಸುತ್ತೋಲೆಯ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿ, ನಿತೀಶ್ ಕುಮಾರ್ ಅವರು ಮುಸ್ಸೊಲಿನಿ ಹಾಗೂ ಹಿಟ್ಲರ್ ಗೆ ಕಠಿಣ ಸವಾಲೊಡ್ಡುತ್ತಿದ್ದಾರೆ ಎಂದು ಬರೆದಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News