ನಿಯಮ ಉಲ್ಲಂಘನೆ, ದ್ವೇಷ ಭಾಷಣ: ಕಂಗನಾ ಟ್ವೀಟ್ ಡಿಲೀಟ್ ಮಾಡಿದ ಟ್ವಿಟರ್

Update: 2021-02-04 10:25 GMT

ಹೊಸದಿಲ್ಲಿ: ಟ್ವಿಟರ್ ನ ಕೆಲವು ನಿಯಮಗಳನ್ನು ಉಲ್ಲಂಘಿಸಿದ ಕಾರಣ ಬಾಲಿವುಡ್ ನಟಿ ಕಂಗನಾ ರಣಾವತ್ ರ ಕೆಲವು ಟ್ವೀಟ್ ಗಳನ್ನು ಟ್ವಿಟರ್ ಅಳಿಸಿ ಹಾಕಿದೆ ಎಂದು ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಗಣ್ಯರು ಮಾಡಿದ್ದ ಟ್ವೀಟ್ ಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ದ್ವೇಷ ಪೂರಿತ ಮಾತುಗಳನ್ನು ಕಂಗನಾ ಬಳಸಿದ್ದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

"ಟ್ವಿಟರ್ ನ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡುವ ಟ್ವೀಟ್ ಗಳನ್ನು ನಾವು ಅಳಿಸಿ ಹಾಕಿದ್ದೇವೆ" ಎಂದು ಟ್ವಿಟರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾಗಿ ವರದಿ ತಿಳಿಸಿದೆ.

ಕ್ರಿಕೆಟಿಗ ರೋಹಿತ್ ಶರ್ಮಾ ಪೋಸ್ಟ್ ಮಾಡಿದ್ದ ಟ್ವೀಟ್ ಹಾಗೂ ಅಂತಾರಾಷ್ಟ್ರೀಯ ಗಾಯಕಿ ರಿಹಾನ್ನಾ ಮಾಡಿದ್ದ ಟ್ವೀಟ್ ಗೆ ಅವಾಚ್ಯವಾಗಿ ಪ್ರತಿಕ್ರಿಯೆ ನೀಡಿದ್ದ ಕಂಗನಾ ಟ್ವೀಟ್ ಅನ್ನು ಅಳಿಸಿ ಹಾಕಲಾಗಿದೆ. ಟ್ವೀಟ್ ನಲ್ಲಿ ಅವರು ರೈತರನ್ನು ಭಯೋತ್ಪಾದಕರು ಎಂದು ಕರೆದಿದ್ದರು ಮಾತ್ರವಲ್ಲದೇ ಭಾರತೀಯ ಕ್ರಿಕೆಟಿಗರನ್ನು ದೋಭಿ ಘಾಟ್ ನ ನಾಯಿ ಎಂದು ಸಂಬೋಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News