×
Ad

ಮರಿಯಾ ಶರಪೋವಾ ಫೇಸ್ಬುಕ್ ಖಾತೆಗೆ ತೆರಳಿ ಕ್ಷಮೆ ಯಾಚಿಸುತ್ತಿರುವ ಮಲಯಾಳಿಗಳು: ಕಾರಣವೇನು ಗೊತ್ತೇ?

Update: 2021-02-04 22:44 IST

ಹೊಸದಿಲ್ಲಿ: ಖ್ಯಾತ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾರವರ ಸಾಮಾಜಿಕ ತಾಣ ಖಾತೆಗಳಿಗೆ ತೆರಳಿ ಮಲಯಾಳಿಗಳು ಕ್ಷಮೆ ಯಾಚನೆಯನ್ನು ಪ್ರಾರಂಭಿಸಿದ್ದಾರೆ ಎಂದು thehindu.com ವರದಿ ಮಾಡಿದೆ.

 ಈ ಹಿಂದೆ ಮರಿಯಾ ಶರಪೋವಾ "ನನಗೆ ಸಚಿನ್ ತೆಂಡುಲ್ಕರ್ ಅಂದರೆ ಯಾರೆಂದು ತಿಳಿದಿಲ್ಲ" ಎಂದು  ಹೇಳಿಕೆ ನೀಡಿದ್ದಾಗ ಮಲಯಾಳಿಗಳು ಟ್ರೋಲ್ ಮಾಡಿದ್ದರು. ಇದೀಗ ಸಚಿನ್‌ ತೆಂಡೂಲ್ಕರ್,‌ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸದೇ ಕೇಂದ್ರ ಸರಕಾರದ ಪರ ಟ್ವೀಟ್‌ ಮಾಡಿದ್ದನ್ನು ಖಂಡಿಸಿ ಮಲಯಾಳಿಗಳು ಈ ಹಿಂದೆ ಶರಪೋವಾರನ್ನು ಟೀಕಿಸಿದ್ದಕ್ಕಾಗಿ ಕಮೆಂಟ್‌ ಮೂಲಕ ಕ್ಷಮೆ ಯಾಚಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

"ನೀವು ಈ ಹಿಂದೆ ಸಚಿನ್‌ ತೆಂಡೂಲ್ಕರ್‌ ಯಾರೆಂದು ತಿಳಿದಿಲ್ಲ ಎಂದಾಗ ನಾವು ನಿಮ್ಮ ಕುರಿತು ಟ್ರೋಲ್‌ ಮಾಡಿದ್ದೆವು. ದಯವಿಟ್ಟು ಕ್ಷಮಿಸಿ. ಈಗ ಸಚಿನ್‌ ಯಾರೆಂದು ನಮಗೂ ತಿಳಿದಿಲ್ಲ" ಎಂದು ಬಳಕೆದಾರರು ಕಮೆಂಟ್‌ ಮಾಡಿದ್ದಾರೆ. ಓರ್ವ ಫೇಸ್‌ ಬುಕ್‌ ಬಳಕೆದಾರ ಮಲಯಾಳಂನ ಪ್ರಸಿದ್ಧ ಚಿತ್ರ ದೇವಾಸುರಂʼ ನ ಹಾಡೊಂದರ ಯೂಟ್ಯೂಬ್‌ ಲಿಂಕ್‌ ಅನ್ನೂ ಕಮೆಂಟಿಸಿದ್ದು, ಈ ಹಾಡಿನಲ್ಲಿ ತಪ್ಪುಕಲ್ಪನೆಗೊಳಗಾದ ಮಗ ತನ್ನ ತಂದೆಯೊಂದಿಗೆ ಕ್ಷಮೆ ಯಾಚಿಸುವ ದೃಶ್ಯವಿದೆ. ಇನ್ನೋರ್ವ ವ್ಯಕ್ತಿ ಶರಪೋವಾರೊಂದಿಗೆ ಕ್ಷಮೆ ಯಾಚಿಸಿ ʼತ್ರಿಶೂರ್‌ ಪೂರಂʼಗೆ ಆಗಮಿಸುವಂತೆ ಆಹ್ವಾನವನ್ನೂ ನೀಡಿದ್ದಾನೆ ಎನ್ನಲಾಗಿದೆ.

Looking into the future with Therabody All the BTS footage up on Instagram stories https://bit.ly/3tpgepw

Posted by Maria Sharapova on Tuesday, 2 February 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News