×
Ad

ಗಣರಾಜ್ಯೋತ್ಸವ ಹಿಂಸಾಚಾರದ ರಾತ್ರಿ ಪಂಚತಾರಾ ಹೊಟೇಲ್ ನಲ್ಲಿ ತಂಗಿದ್ದ ಸಿಧು: ದಿಲ್ಲಿ ಪೊಲೀಸರು

Update: 2021-02-09 23:02 IST

ಹೊಸದಿಲ್ಲಿ: ಜನವರಿ 26ರಂದು ರಾಷ್ಟ್ರರಾಜಧಾನಿಯಲ್ಲಿ ನಡೆದಿರುವ ಹಿಂಸಾಚಾರದ ಆರೋಪಿ ನಟ ದೀಪ್ ಸಿಧು ಅವರನ್ನು ದಿಲ್ಲಿ ನ್ಯಾಯಾಲಯವು ಮಂಗಳವಾರ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಗಣರಾಜ್ಯೋತ್ಸವ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸ್ ಸ್ಪೆಷಲ್ ಸೆಲ್ ಮಂಗಳವಾರ ಬೆಳಗ್ಗೆ ಸಿಧುವನ್ನು ಬಂಧಿಸಿತ್ತು.

ಜನವರಿ 26ರಂದು ಕೆಂಪುಕೋಟೆಯಿಂದ ನಿರ್ಗಮಿಸಿದ ಬಳಿಕ ದೀಪ್ ಸಿಧು ಸಿಂಘು ಗಡಿಯ ಪ್ರತಿಭಟನಾಸ್ಥಳಕ್ಕೆ ತೆರಳಿದ್ದ. ಪಂಚತಾರಾ ಹೊಟೇಲ್ ನಲ್ಲಿ ರಾತ್ರಿ ಕಳೆದಿದ್ದ ಸಿಧು ಹಲವು ಜನರನ್ನು ಭೇಟಿಯಾಗಿದ್ದ. ಘಟನೆ ನಡೆದ ರಾತ್ರಿ ಸಿಧುವನ್ನು ಭೇಟಿಯಾದ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವ ಕುರಿತು ತನಿಖೆ ನಡಸಲಾಗುತ್ತಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

ಘಟನೆಯ ಮರುದಿನ ಪಂಜಾಬ್ ಗೆ ಪರಾರಿಯಾಗಿದ್ದ ಸಿಧು ಹಲವು ಸ್ಥಳಗಳಲ್ಲಿ ಆಶ್ರಯ ಪಡೆದಿದ್ದ. ದಿನಪೂರ್ತಿ ತಲೆ ಮರೆಸಿಕೊಂಡಿದ್ದ. ಪಂಜಾಬ್-ಹರ್ಯಾಣ ಗಡಿ ಪ್ರದೇಶದಲ್ಲಿ ದೀಪ್ ಸಿಧು ಅಡಗಿ ಕುಳಿತಿದ್ದ. ಸಿಧು ಮೊಬೈಲ್ ಫೋನ್ ಬಳಸುತ್ತಿರಲಿಲ್ಲ. ಹೀಗಾಗಿ ಆತನನ್ನು ಪತ್ತೆ ಹೆಚ್ಚಲು ದಿಲ್ಲಿ ಪೊಲೀಸರಿಗೆ ಸವಾಲಾಯಿತು. ಆತ ಕಳೆದ 5 ದಿನಗಳಿಂದ ಒಂದೇ ಬಟ್ಟೆ ಧರಿಸಿದ್ದ. ತಾನಿರುವ ಸ್ಥಳ ಗೊತ್ತಾಗುತ್ತದೆಂಬ ಭಯದಲ್ಲಿ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿರಲಿಲ್ಲ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News