ಭಾರತ-ಪಾಕ್ ಗಡಿಯಲ್ಲಿ ಮುಳ್ಳುತಂತಿ ಬೇಲಿ ಅಳವಡಿಕೆ ಕಾರ್ಯ ಪೂರ್ಣ

Update: 2021-02-10 17:42 GMT

ಹೊಸದಿಲ್ಲಿ, ಫೆ.10: ಪಂಜಾಬ್‌ನಲ್ಲಿ ಭಾರತ-ಪಾಕಿಸ್ತಾನ ಗಡಿಭಾಗದಲ್ಲಿ ಆಧುನಿಕ ವಿನ್ಯಾಸದ ಮುಳ್ಳುತಂತಿ ಬೇಲಿ ಅಳವಡಿಕೆಯ ಪ್ರಾಯೋಗಿಕ ಯೋಜನೆ 2020ರ ಮಾರ್ಚ್‌ನಲ್ಲಿ ಪೂರ್ಣಗೊಂಡಿದೆ ಎಂದು ಗೃಹ ಇಲಾಖೆ ಬುಧವಾರ ಮಾಹಿತಿ ನೀಡಿದೆ.

  ಪಂಜಾಬ್‌ನಲ್ಲಿ ಭಾರತ-ಪಾಕ್ ಗಡಿಭಾಗದಲ್ಲಿ ಭದ್ರತೆ ಹೆಚ್ಚಿಸಲು ರೂಪಿಸಲಾದ ಮುಳ್ಳುತಂತಿ ಬೇಲಿ ಅಳವಡಿಕೆಯ ಪ್ರಾಯೋಗಿಕ ಯೋಜನೆಯ ಬಗ್ಗೆ ಬಿಜೆಪಿ ಸಂಸದ ಶ್ವೇತ್ ಮಲಿಕ್ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಇಲಾಖೆಯ ಸಹಾಯಕ ಸಚಿವ ನಿತ್ಯಾನಂದ ರಾಯ್, ಯೋಜನೆ 2020ರ ಮಾರ್ಚ್‌ನಲ್ಲೇ ಪೂರ್ಣಗೊಂಡಿದೆ ಎಂದಿದ್ದಾರೆ.

 ಅಮೃತಸರದಲ್ಲಿ ಭಾರತ-ಪಾಕ್ ಗಡಿಭಾಗದ 7.18 ಕಿ.ಮೀ ವ್ಯಾಪ್ತಿಯಲ್ಲಿ ಹಳೆಯ ಮಾದರಿಯ ಮುಳ್ಳುತಂತಿ ಬೇಲಿಯ ಬದಲು ನವೀನ ಮಾದರಿಯ ಮುಳ್ಳುತಂತಿ ಬೇಲಿ ಅಳವಡಿಸುವ ಯೋಜನೆಗೆ ಕೇಂದ್ರದಿಂದ 2019ರಲ್ಲಿ ಅನುಮೋದನೆ ದೊರಕಿತ್ತು ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News