4 ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಅಂತಿಮ ಸಿದ್ಧತೆ ನಡೆಸುತ್ತಿರುವ ಕೇಂದ್ರ ಸರಕಾರ

Update: 2021-02-15 17:57 GMT

ಹೊಸದಿಲ್ಲಿ, ಫೆ. 15: ಸರಕಾರಿ ಸೊತ್ತನ್ನು ಮಾರಾಟ ಮಾಡುವ ಹಾಗೂ ಸರಕಾರಿ ಆದಾಯವನ್ನು ಹೆಚ್ಚಿಸುವ ನೂತನ ಕ್ರಮವಾಗಿ ಸರಕಾರಿ ಸ್ವಾಮ್ಯದ ನಾಲ್ಕು ಮಧ್ಯಮ ಗಾತ್ರದ ಬ್ಯಾಂಕ್‌ಗಳ ಅಂತಿಮ ಪಟ್ಟಿಯನ್ನು ಕೇಂದ್ರ ಸರಕಾರ ಸಿದ್ಧಪಡಿಸಿದೆ.

ಅಂತಿಮ ಪಟ್ಟಿಯಲ್ಲಿರುವ ನಾಲ್ಕು ಬ್ಯಾಂಕ್‌ಗಳೆಂದರೆ ಬ್ಯಾಂಕ್ ಆಫ್ ಮಹಾರಾಷ್ಟ್ರ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಎಂದು ಹೆಸರು ಹೇಳಲಿಚ್ಛಿಸದ ಇಬ್ಬರು ಅಧಿಕಾರಿಗಳು ರಾಯ್ಟರ್ಸ್‌ಗೆ ತಿಳಿಸಿದ್ದಾರೆ.

ಆಯ್ಕೆ ಮಾಡಲಾದ ಬ್ಯಾಂಕ್‌ಗಳಲ್ಲಿ ಎರಡು ಬ್ಯಾಂಕ್‌ಗಳು ಎಪ್ರಿಲ್‌ನಲ್ಲಿ ಆರಂಭವಾಗುವ ವಿತ್ತೀಯ ವರ್ಷ 2021/22ರಲ್ಲಿ ಮಾರಾಟ ಮಾಡಲು ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಮೊದಲ ಸುತ್ತಿನ ಖಾಸಗೀಕರಣದಲ್ಲಿ ಕೇಂದ್ರ ಸರಕಾರ ಮಧ್ಯಮ ಗಾತ್ರದಿಂದ ಸಣ್ಣ ಬ್ಯಾಂಕ್‌ಗಳ ವರೆಗೆ ಪರಿಗಣಿಸಿದೆ. ಮುಂದಿನ ದಿನಗಳಲ್ಲಿ ದೇಶದ ಕೆಲವು ದೊಡ್ಡ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವತ್ತ ಗಮನ ಹರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಭಾರತದ ಅತೀ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬಹುತೇಕ ಶೇರುಗಳನ್ನು ಕೇಂದ್ರ ಸರಕಾರ ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News