ನೇಪಾಳದಲ್ಲಿ ಬಿಜೆಪಿ ಸರಕಾರ: ತ್ರಿಪುರಾ ಮುಖ್ಯಮಂತ್ರಿ ಹೇಳಿಕೆ; ಭಾರತಕ್ಕೆ ಪ್ರತಿಭಟನೆ ಸಲ್ಲಿಸಿದ ನೇಪಾಳ

Update: 2021-02-16 17:59 GMT

ಕಠ್ಮಂಡು (ನೇಪಾಳ), ಫೆ. 16: ನೇಪಾಳ ಮತ್ತು ಶ್ರೀಲಂಕಾಗಳಲ್ಲಿ ಬಿಜೆಪಿ ಸರಕಾರಗಳನ್ನು ಸ್ಥಾಪಿಸುವ ಉದ್ದೇಶವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊಂದಿದ್ದಾರೆ ಎಂಬುದಾಗಿ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ನೀಡಿರುವ ಸಾರ್ವಜನಿಕ ಹೇಳಿಕೆಯ ವಿರುದ್ಧ ನೇಪಾಳ ಮಂಗಳವಾರ ಭಾರತಕ್ಕೆ ಔಪಚಾರಿಕ ಪ್ರತಿಭೆಟನೆ ಸಲ್ಲಿಸಿದೆ.

ದೇಬ್ ಹೇಳಿಕೆಯನ್ನು ಹೊತ್ತ ವರದಿಗಳನ್ನು ನೇಪಾಳಿ ಟ್ವಿಟರ್ ಬಳಕೆದಾರರು ಮಂಗಳವಾರ ದೇಶದ ಪ್ರಧಾನಿ ಮತ್ತು ವಿದೇಶ ಸಚಿವರ ಗಮನಕ್ಕೆ ತಂದ ಬಳಿಕ, ಈ ಬಗ್ಗೆ ಔಪಚಾರಿಕ ಪ್ರತಿಭಟನೆ ಸಲ್ಲಿಸಲಾಗಿದೆ ಎಂದು ನೇಪಾಳ ವಿದೇಶ ಸಚಿವ ಪ್ರದೀಪ್ ಜ್ಞಾವಳಿ ಹೇಳಿದರು.

ಭಾರತದಲ್ಲಿ ಎಲ್ಲ ರಾಜ್ಯಗಳನ್ನು ಗೆದ್ದ ಬಳಿಕ, ನೆರೆಯ ದೇಶಗಳಲ್ಲಿ ಪಕ್ಷವನ್ನು ಸ್ಥಾಪಿಸಿ ಸರಕಾರಗಳನ್ನು ರ3ಚಿಸುವ ಇರಾದೆಯನ್ನು ಬಿಜೆಪಿ ಹೊಂದಿದೆ ಎಂದು ಶನಿವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ತ್ರಿಪುರಾ ಮುಖ್ಯಮಂತ್ರಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News