×
Ad

ಸ್ವತಂತ್ರತಾ ಸಂಗ್ರಾಮ ಸೇನಾನಿ ರೈಲಿನಲ್ಲಿ 1.4 ಕೋ. ರೂ. ಇದ್ದ ಬ್ಯಾಗ್ ಪತ್ತೆ

Update: 2021-02-17 22:31 IST

ಕಾನ್ಪುರ, ಫೆ. 17: ಸ್ವತಂತ್ರತಾ ಸಂಗ್ರಾಮ ಸೇನಾನಿ ವಿಶೇಷ ರೈಲಿನಲ್ಲಿ ವಾರಸುದಾರರಿಲ್ಲದ 1.4 ಕೋಟಿ ರೂಪಾಯಿ ಇದ್ದ ಬ್ಯಾಗ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ರೈಲು ಬಿಹಾರದ ಜಯನಗರದಿಂದ ದಿಲ್ಲಿಗೆ ಸಂಚರಿಸುತ್ತಿದ್ದ ಸಂದರ್ಭ ಮಂಗಳವಾರ ಈ ಬ್ಯಾಗ್ ಪತ್ತೆಯಾಗಿದೆ ಎಂದು ರೈಲ್ವೆಯ ಉಪ ಮುಖ್ಯ ಸಂಚಾರ ಮ್ಯಾನೇಜರ್ ಹಿಮಾಂಶು ಶೇಖರ್ ಹೇಳಿದ್ದಾರೆ.

ವಾರಸುದಾರರಿಲ್ಲದ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಅನ್ನು ರೈಲಿನ ಸಿಬ್ಬಂದಿ ಗಮನಿಸಿದರು. ಅನಂತರ ರೈಲ್ವೆ ಅಧಿಕಾರಿಗಳಿಗೆ ತಿಳಿಸಿದರು. ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಹಾಗೂ ಸರಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಈ ಬ್ಯಾಗ್ ಅನ್ನು ವಶಕ್ಕೆ ತೆಗೆದುಕೊಂಡಿತು ಎಂದು ಅವರು ಹೇಳಿದ್ದಾರೆ. ಈ ಬ್ಯಾಗ್ ಅನ್ನು ರೈಲ್ವೆಯ ಸಿಬ್ಬಂದಿ, ಆರ್‌ಪಿಎಫ್, ಜಿಆರ್‌ಪಿ ಎದುರಲ್ಲಿ ತೆರೆಯಲಾಯಿತು. ಅದರಲ್ಲಿ ಪ್ಯಾಕ್ ಮಾಡಲಾದ ನೋಟುಗಳ ಕಂತೆ ಕಂಡು ಬಂದಿತು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News