ಕ್ಷೇತ್ರದಿಂದ ಹೊರಗಿರುವ ಮತದಾರರಿಂದ ಅಂಚೆ ಮತದಾನಕ್ಕೆ ಅವಕಾಶ ಕೋರಿಕೆ: ಕೇಂದ್ರ, ಚು.ಆಯೋಗಕ್ಕೆ ಸುಪ್ರೀಂ ನೋಟಿಸ್

Update: 2021-02-18 15:19 GMT

ಹೊಸದಿಲ್ಲಿ,ಫೆ.18: ಎನ್ನಾರೈಗಳು ಸೇರಿದಂತೆ ತಮ್ಮ ಮತಕ್ಷೇತ್ರಗಳಿಂದ ಹೊರಗಿರುವ ಜನರಿಗೆ ಅಂಚೆ ಮೂಲಕ ಮತದಾನಕ್ಕೆ ಅವಕಾಶ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ಕಾನೂನು ಮತ್ತು ನ್ಯಾಯ ಸಚಿವಾಲಯ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್‌ಗಳನ್ನು ಹೊರಡಿಸಿದೆ.

ಇದು ಯಾವ ಸೀಮೆಯ ಅರ್ಜಿ? ನೀವು ಇಂಗ್ಲೆಂಡ್ ನಲ್ಲಿ ಕುಳಿತುಕೊಂಡು ಇಲ್ಲಿ ಮತದಾನ ಮಾಡುತ್ತೀರಾ? ನಿಮ್ಮ ಮತಕ್ಷೇತ್ರಕ್ಕೆ ತೆರಳಿ ಮತದಾನ ಮಾಡುವ ಕಾಳಜಿ ನಿಮಗಿಲ್ಲದಿದ್ದರೆ ಕಾನೂನು ಏಕೆ ನಿಮಗೆ ನೆರವಾಗಬೇಕು ಎಂದು ಮುಖ್ಯ ನ್ಯಾಯಾಧೀಶ ಎಸ್.ಎ.ಬೋಬ್ಡೆ ನೇತೃತ್ವದ ಪೀಠವು ಅರ್ಜಿದಾರರನ್ನು ಪ್ರಶ್ನಿಸಿತು.

ಮತದಾನಕ್ಕೆ ಸ್ಥಳವನ್ನು ನಿಗದಿಗೊಳಿಸಲು ಸಂಸತ್ತು ಮತ್ತು ಸರಕಾರಕ್ಕೆ ಅಧಿಕಾರವಿದೆಯೇ ಎಂದೂ ನ್ಯಾಯಾಲಯವು ಪ್ರಶ್ನಿಸಿತು.

ಅಂಚೆ ಮತದಾನ ವ್ಯವಸ್ಥೆಯಿದ್ದು,ಅದು ಕೆಲವೇ ಜನರಿಗೆ ಸೀಮಿತವಾಗಿದೆ ಎಂದು ಅರ್ಜಿದಾರ ಎಸ್.ಸತ್ಯನ್ ಪರ ವಕೀಲ ಕಾಳೀಶ್ವರಂ ರಾಜ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಚುನಾವಣೆಗಳ ಸಮಯದಲ್ಲಿ ತಮ್ಮ ಮತಕ್ಷೇತ್ರಗಳಿಂದ ಹೊರಗಿರುವ ವಲಸೆ ಕಾರ್ಮಿಕರು,ವಿದ್ಯಾರ್ಥಿಗಳು,ಎನ್ನಾರೈಗಳು ಮತ್ತು ಇತರರಿಗೆ ಮತದಾನ ಹಕ್ಕುಗಳನ್ನು ಕೋರಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News