ಹೆಚ್ಚು ವಿದ್ಯಾವಂತರು, ಪರಿಣಿತರಿಂದಲೇ ವಿಶ್ವದಾದ್ಯಂತ ಭಯೋತ್ಪಾದನೆ ಹರಡುತ್ತಿದೆ: ಪ್ರಧಾನಿ ಮೋದಿ

Update: 2021-02-19 08:23 GMT

 ಹೊಸದಿಲ್ಲಿ: ವಿಶ್ವದಾದ್ಯಂತ ಭಯೋತ್ಪಾದನೆಯನ್ನು ಹರಡುತ್ತಿರುವ ಹೆಚ್ಚಿನ ಜನರು ಹೆಚ್ಚು ವಿದ್ಯಾವಂತರು ಹಾಗೂ ಹೆಚ್ಚು ನುರಿತವರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

 ವಿಶ್ವಭಾರತಿ ವಿಶ್ವ ವಿಶ್ವವಿದ್ಯಾಲಯದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, “ವಿಶ್ವದಾದ್ಯಂತ ಭಯೋತ್ಪಾದನೆ ಹಾಗೂ ಹಿಂಸಾಚಾರವನ್ನು ಹರಡುತ್ತಿರುವ ಅನೇಕ ಜನರು ಹೆಚ್ಚು ವಿದ್ಯಾವಂತರು, ಹೆಚ್ಚು ಕೌಶಲ್ಯ ಹೊಂದಿರುವವರು. ಮತ್ತೊಂದೆಡೆ ಕೋವಿಡ್ ನಂತಹ ಸಾಂಕ್ರಾಮಿಕ ರೋಗಗಳಿಂದ ಜನರ ಪ್ರಾಣ ಉಳಿಸಲು ಕೆಲವರು ಆಸ್ಪತ್ರೆಯಲ್ಲಿ, ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಾ ತಮ್ಮ ಪ್ರಾಣವನ್ನೇ ಅಪಾಯಕ್ಕೆ ಒಡ್ಡುತ್ತಿದ್ದಾರೆ. ಇದು ಸಿದ್ದಾಂತದ ಕುರಿತಾಗಿಲ್ಲ. ಆದರೆ ಇದು ಅವರ ಮನೋಧರ್ಮವಾಗಿದೆ ಎಂದು  ಹೇಳಿದರು.

 ನೀವು ಏನು ಮಾಡುತ್ತೀರಿ ಎನ್ನುವುದು ನಿಮ್ಮ ಮನಸ್ಥಿತಿ ಸಕಾರಾತ್ಮಕ ಅಥವಾ ಋಣಾತ್ಮಕ ವಾಗಿದೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಾವು ಸಮಸ್ಯೆಯ ಭಾಗವಾಗಬೇಕೆ ಅಥವಾ ಪರಿಹಾರವಾಗಬೇಕೆ ಎಂದು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ ಎಂದು ಪಿಎಂ ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News