ಹೋಟೆಲ್‌ ಕೊಠಡಿಯಲ್ಲಿ‌ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಸಂಸದ ಮೋಹನ್‌ ದೇಲ್ಕರ್

Update: 2021-02-22 13:59 GMT

 ಮುಂಬೈ,ಫೆ.22: ದಾದ್ರಾ ಮತ್ತು ನಗರ ಹವೇಲಿಯ ಪಕ್ಷೇತರ ಸಂಸದ ಮೋಹನ ದೇಲ್ಕರ್(58) ಅವರು ಸೋಮವಾರ ಮಧ್ಯಾಹ್ನ ಮುಂಬೈನ ಮರೀನ್ ಡ್ರೈವ್‌ನ ಹೋಟೆಲ್‌ವೊಂದರಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ದೇಲ್ಕರ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಗಳು ಸೂಚಿಸಿದ್ದು,ಸ್ಥಳದಲ್ಲಿ ಆತ್ಮಹತ್ಯಾ ಪತ್ರವು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯು ಪ್ರಗತಿಯಲ್ಲಿದೆ. ಮರಣೋತ್ತರ ಪರೀಕ್ಷೆಯ ಬಳಿಕವೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸ್ ಹೇಳಿಕೆಯು ತಿಳಿಸಿದೆ.

ಏಳನೇ ಬಾರಿಗೆ ಸಂಸದರಾಗಿದ್ದ ದೇಲ್ಕರ್ ಮೊದಲು ಕಾಂಗ್ರೆಸ್‌ನಲ್ಲಿದ್ದರು. 2019ರಲ್ಲಿ ದಾದ್ರಾ ಮತ್ತು ನಗರ ಹವೇಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ಪಕ್ಷವನ್ನು ತೊರೆದಿದ್ದರು.

ದೇಲ್ಕರ್ ಸಂಸತ್ತಿನ ಸಿಬ್ಬಂದಿ,ಸಾರ್ವಜನಿಕ ಕುಂದುಕೊರತೆಗಳು,ಕಾನೂನು ಮತ್ತು ನ್ಯಾಯ ಕುರಿತು ಸ್ಥಾಯಿ ಸಮಿತಿಯ ಹಾಗೂ ಗೃಹಸಚಿವಾಲಯದ ಸಮಾಲೋಚನಾ ಸಮಿತಿಯ ಸದಸ್ಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News