ತೆಲಂಗಾಣ ವಿಧಾನಪರಿಷತ್ ಚುನಾವಣೆ: ಪಿವಿ ನರಸಿಂಹರಾವ್ ಪುತ್ರಿ ಅಭ್ಯರ್ಥಿ

Update: 2021-02-22 16:34 GMT
ಫೋಟೊ ಕೃಪೆ: ANI

ಹೈದರಾಬಾದ್, ಫೆ.22: ತೆಲಂಗಾಣ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಪುತ್ರಿ ಸುರಭಿವಾಣಿ ದೇವಿ ಟಿಆರ್‌ಎಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ.

ಮಹಬೂಬ್ ನಗರ- ರಂಗಾರೆಡ್ಡಿ-ಹೈದರಾಬಾದ್ ಪದವೀಧರ ಕ್ಷೇತ್ರದಿಂದ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್) ಅಭ್ಯರ್ಥಿಯಾಗಿ ಸುರಭಿವಾಣಿ ದೇವಿ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಕೆ. ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್ ಪಕ್ಷ ಪ್ರತಿಸ್ಪರ್ಧಿಗಳಾಗಿವೆ. ಕಾಂಗ್ರೆಸ್ ಮುಖಂಡರಾಗಿದ್ದ ಮಾಜಿ ಪ್ರಧಾನಿ ದಿವಂಗತ ಪಿವಿ ನರಸಿಂಹ ರಾವ್‌ರನ್ನು ‘ತೆಲಂಗಾಣದ ಅಚ್ಚುಮೆಚ್ಚಿನ ಪುತ್ರ’ ಎಂದು ಶ್ಲಾಘಿಸಿರುವ ಟಿಆರ್‌ಎಸ್, ಪಿವಿಎನ್ ಜನ್ಮಶತಮಾನೋತ್ಸವದ ಹಿನ್ನೆಲೆಯಲ್ಲಿ ವರ್ಷಪೂರ್ತಿ ಕಾರ್ಯಕ್ರಮ ಆಯೋಜಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದರು. ಅಲ್ಲದೆ ಪಿವಿ ನರಸಿಂಹ ರಾಯರಿಗೆ ಭಾರತರತ್ನ ಪುರಸ್ಕಾರ ನೀಡಬೇಕೆಂದು ಕೇಂದ್ರವನ್ನು ಆಗ್ರಹಿಸುವ ನಿರ್ಣಯವನ್ನು ತೆಲಂಗಾಣ ವಿಧಾನಸಭೆ ಅಂಗೀಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News