ಇಂಧನ ಬೆಲೆ ಏರಿಕೆ ಕುರಿತ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2021-02-26 08:18 GMT

ಹೊಸದಿಲ್ಲಿ: ಇಂಧನದ ಮೇಲೆ ವಿಧಿಸಲಾಗಿರುವ ತೆರಿಗೆಗಳನ್ನು ಕಡಿಮೆಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಸ್ಪರ ಮಾತುಕತೆ ನಡೆಸಬೇಕು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಇತ್ತೀಚೆಗಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಗಗನಕ್ಕೇರುತ್ತಿದೆ.

ಕೇಂದ್ರ ಸರಕಾರವು ಇಂಧನದ ಮೇಲಿನ ಸೆಸ್ ಅಥವಾ ಇತರ ತೆರಿಗೆಗಳನ್ನು ಕಡಿಮೆ ಮಾಡುವ ಕುರಿತಂತೆ ಚಿಂತನೆ ನಡೆಸಿದೆಯೇ? ಎಂದು ಪ್ರಶ್ನಿಸಿದ್ದಾಗ, ಈ ಪ್ರಶ್ನೆಯೇ ನನ್ನನ್ನ ಸಂದಿಗ್ದತೆಗೆ ಸಿಲುಕಿಸಿದೆ ಎಂದರು.

ಕೇಂದ್ರ ಸರಕಾರವು ಇಂಧನ ಮೇಲಿನ ದರ ಏರಿಕೆಯಿಂದ ಆದಾಯ ಗಳಿಸುತ್ತಿದೆ ಎಂಬ ಅಂಶವನ್ನು ಮುಚ್ಚಿಡುವುದಿಲ್ಲ. ರಾಜ್ಯಗಳ ಪರಿಸ್ಥಿತಿಯೂ ಇದೆ ಆಗಿದೆ. ಗ್ರಾಹಕರಿಗೆ ಭಾರ ಕಡಿಮೆ ಮಾಡಲೇಬೇಕೆನ್ನುವುದನ್ನು ನಾನು ಒಪ್ಪುವೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಸ್ಪರ ಮಾತುಕತೆ ನಡೆಸಬೇಕು ಎಂದು ಅಹಮದಾಬಾದ್ ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News