ಇಸ್ರೊದಿಂದ ಪಿಎಸ್ ಎಲ್ ವಿ-ಸಿ 51 ರಾಕೆಟ್ ಯಶಸ್ವಿ ಉಡಾವಣೆ

Update: 2021-02-28 06:04 GMT
Photo: Twitter(@isro)

ಬೆಂಗಳೂರು: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ ಎಲ್ ವಿ-ಸಿ 51 ರಾಕೆಟ್ ನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. 2021ರಲ್ಲಿ ಇಸ್ರೊ ನಡೆಸಿರುವ ಮೊದಲ ಬಾಹ್ಯಾಕಾಶ ಉಡಾವಣೆ ಇದಾಗಿದೆ.

ಹವಾಮಾನಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದ್ದ ಸಮಯಕ್ಕೆ ಸರಿಯಾಗಿ ಬೆಳಗ್ಗೆ 10:24ಕ್ಕೆ ರಾಕೆಟ್ ಉಡಾವಣೆ ಮಾಡಲಾಗಿದೆ. ಪಿಎಸ್ ಎಲ್ ವಿ-ಸಿ 51 ರಾಕೆಟ್ ಬ್ರೆಝಿಲ್ ನ ಅಮೆಜಾನಿಯಾ-1 ಉಪಗ್ರಹವನ್ನು ಹೊತ್ತೊಯ್ದಿದೆ. ರಾಕೆಟ್ ಉಡಾವಣೆಯಾಗಿ 5 ನಿಮಿಷಗಳಲ್ಲಿ ಮೂರನೇ ಹಂತವನ್ನು ಯಶಸ್ವಿಯಾಗಿ ಪೂರೈಸಿ ಮುಂದೆ ಸಾಗಿದೆ.

ಇದು ಇಸ್ರೊ ಪಿಎಸ್ ಎಲ್ ವಿ ರಾಕೆಟ್ ನ 53ನೇ ಮಿಷನ್ ಆಗಿದ್ದು,ಪಿಎಸ್ ಎಲ್ ವಿ-ಸಿ 51 ರಾಕೆಟ್ ಅಮೆಜಾನಿಯಾ-1 ಉಪಗ್ರಹದ ಜೊತೆಗೆ ಇತರ 18 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. 

ಸತೀಶ್ ಧವನ್ ಸ್ಯಾಟ್(ಎಸ್ ಡಿ ಸ್ಯಾಟ್)ಜೊತೆಗೆ 25,000 ಹೆಸರುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ ಎಂದು ಎಸ್ ಕೆ ಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಾಹ್ಯಾಕಾಶ ನೌಕೆಯ ಪ್ಯಾನೆಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಸೃಜಿಸಲಾಗಿದೆ ಹಾಗೂ ಎಸ್ ಡಿ ಕಾರ್ಡ್‍ನಲ್ಲಿ ಭಗವದ್ಗೀತೆಯನ್ನು ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News