×
Ad

ಗುರುಗ್ರಾಮದ ಅಪಾರ್ಟ್‍ಮೆಂಟ್ ಕಾಂಪ್ಲೆಕ್ಸ್ ನ್ನು ಕಂಟೈನ್ಮೆಂಟ್ ವಲಯವಾಗಿ ಘೋಷಣೆ

Update: 2021-02-28 11:40 IST

ಗುರುಗ್ರಾಮ: 20ಕ್ಕೂ ಅಧಿಕ ನಿವಾಸಿಗರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಗುರುಗ್ರಾಮದ ಅಪಾರ್ಟ್‍ಮೆಂಟ್ ಕಾಂಪ್ಲೆಕ್ಸನ್ನು ಕೋವಿಡ್-19 ಕಂಟೈನ್ಮೆಂಟ್ ವಲಯವಾಗಿ ಘೋಷಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಸಚಿವಾಲಯದ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಎಎನ್ ಐ ತಿಳಿಸಿದ್ದಾರೆ.

ಮೂವರಲ್ಲಿ ಪಾಸಿಟಿವ್ ಕಂಡುಬಂದ ಬಳಿಕ ನಿವಾಸಿಗರಿಂದ ಸ್ಯಾಂಪಲ್ ಗಳನ್ನು ಪಡೆಯಲಾಗಿತ್ತು. ಫಲಿತಾಂಶ ಬಂದಾಗ 20ಕ್ಕೂ ಅಧಿಕ ಜನರಲ್ಲಿ ಪಾಸಿಟಿವ್ ಕಂಡುಬಂದಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಜೆ.ಪ್ರಕಾಶ್ ಎಎನ್ ಐಗೆ ತಿಳಿಸಿದ್ದಾರೆ.

ಗುರುಗ್ರಾಮದ ಸೆಕ್ಟರ್ 67ರಲ್ಲಿ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಇದೆ.

ಮೊದಲಿಗೆ 3 ಪ್ರಕರಣಗಳುವ ವರದಿಯಾಗಿದ್ದವು. ಆ ನಂತರ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಯಿತು. ಸುಮಾರು 20 ಮಂದಿಯಲ್ಲಿ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ನಾವು ಕಂಟೈನ್ ಮೆಂಟ್ ಝೋನ್ ಪ್ರಕಟಿಸಲು ನಿರ್ಧರಿಸಿದೆವು. ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಎಎನ್ ಐ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News