ವಿಶ್ವದ ಹಳೆಯ ಭಾಷೆ ತಮಿಳನ್ನು ಕಲಿಯದೇ ಇರುವುದಕ್ಕೆ ವಿಷಾದವಿದೆ: ಪ್ರಧಾನಿ ಮೋದಿ

Update: 2021-02-28 18:32 GMT

 ಹೊಸದಿಲ್ಲಿ, ಫೆ. 28: ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯಾಗಿದ್ದ ದೀರ್ಘ ಕಾಲದ ರಾಜಕೀಯ ಪಯಣದ ಸಂದರ್ಭ ಜಗತ್ತಿನ ಅತಿ ಹಳೆಯ ಭಾಷೆಯಾದ ತಮಿಳು ಕಲಿಯಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ತನಗೆ ವಿಷಾದವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದ್ದಾರೆ.

‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ತಮಿಳು ಸಾಹಿತ್ಯ ಹಾಗೂ ಕಾವ್ಯವನ್ನು ಪ್ರಶಂಸಿಸಿದರು.

ತಮಿಳುನಾಡಿನಲ್ಲಿ ಎಪ್ರಿಲ್ 6ರಂದು ಚುನಾವಣೆ ನಡೆಯಲಿರುವ ವಾರಗಳ ಮುನ್ನ ನರೇಂದ್ರ ಮೋದಿ ಅವರು ತಮಿಳು ಭಾಷೆಯ ಕುರಿತ ಈ ಹೇಳಿಕೆ ನೀಡಿದ್ದಾರೆ.

  ಕೆಲವು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಅಪರ್ಣಾ ರೆಡ್ಡಿ ಜಿ ಅವರು, ‘‘ನೀವು ಹಲವು ವರ್ಷಗಳ ಕಾಲ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿದ್ದೀರಿ. ಏನಾದರೂ ಕಳೆದುಕೊಂಡಿದ್ದೇನೆ ಎಂದು ಎಂದಾದರೂ ಭಾವಿಸಿದ್ದೀರಾ ಎಂದು ಪ್ರಶ್ನಿಸಿದ್ದರು’’ ಎಂದು ಮೋದಿ ಹೇಳಿದರು.

 ನಾನು ಈ ಪ್ರಶ್ನೆಯ ಬಗ್ಗೆ ಚಿಂತಿಸಿದೆ. ನನಗೆ ಜಗತ್ತಿನ ಹಳೆಯ ಭಾಷೆಯಾದ ತಮಿಳನ್ನು ಕಲಿಯಲು ಸಾಧ್ಯವಾಗಲಿಲ್ಲ ಎಂದು ವಿಷಾದ ಉಂಟಾಗಿದೆ. ಇದು ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಹಾಗೂ ಸುಂದರವಾದ ಭಾಷೆ. ಹಲವು ಜನರು ತಮಿಳು ಸಾಹಿತ್ಯ ಹಾಗೂ ತಮಿಳು ಕಾವ್ಯದ ಆಳದ ಬಗ್ಗೆ ನನಗೆ ತಿಳಿಸಿದ್ದರು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News