ಚೆನ್ನೈ ಪ್ರಮುಖ ಕಂಪೆನಿಯ ಮೇಲೆ ಐಟಿ ದಾಳಿ: 220 ಕೋ.ರೂ. ಕಪ್ಪು ಹಣ ಪತ್ತೆ

Update: 2021-02-28 08:06 GMT

ಚೆನ್ನೈ: ಚೆನ್ನೈನ ಪ್ರಮುಖ ಟೈಲ್ಸ್ ಹಾಗೂ ಸ್ಯಾನಿಟರಿವೇರ್ ಉತ್ಪಾದನಾ ಕಂಪೆನಿಯ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಸುಮಾರು 200 ಕೋ.ರೂ. ಕಪ್ಪು ಹಣವನ್ನು ಪತ್ತೆ ಮಾಡಿದೆ ಎಂದು ನೇರ ತೆರಿಗೆಯ ಕೇಂದ್ರ ಮಂಡಳಿ(ಸಿಬಿಡಿಟಿ)ತಿಳಿಸಿದೆ.

 ಫೆಬ್ರವರಿ 26ರಂದು ದಾಳಿ ನಡೆಸಲಾಗಿದ್ದು, ತಮಿಳುನಾಡು, ಗುಜರಾತ್ ಹಾಗೂ ಕೋಲ್ಕತಾ ಒಟ್ಟು 20 ಕಟ್ಟಡಗಳಲ್ಲಿ ಶೋಧ ಹಾಗೂ ಸರ್ವೆ ನಡೆಸಲಾಗಿದೆ. ಟೈಲ್ಸ್ ಹಾಗೂ ಸ್ಯಾನಿಟರಿವೇರ್‌ನ ಉತ್ಪಾದನೆ ಹಾಗೂ ಮಾರಾಟದ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಸಮೂಹ ಸಂಸ್ಥೆಯಲ್ಲಿ ನಡೆಸಲಾದ ದಾಳಿ ವೇಳೆ 8.30 ಕೋ.ರೂ. ನಗದು ವಶಪಡಿಸಿಕೊಳ್ಳಲಾಗಿದೆ.ಈ ಗುಂಪು ದಕ್ಷಿಣ ಭಾರತದ ಟೈಲ್ಸ್ ವ್ಯವಹಾರದಲ್ಲಿ ಮುಂಚೂಣಿಯಲ್ಲಿತ್ತು. ಈ ತನಕ ಒಟ್ಟು ಬಹಿರಂಗಪಡಿಸದ ಆದಾಯ 220 ಕೋ.ರೂ.ವನ್ನು ಪತ್ತೆ ಹಚ್ಚಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News