ಕಟ್ಟಡ ನಿರ್ಮಾಣ ಸ್ಥಳದಿಂದ 11 ಅಡಿ ಉದ್ದದ ಮೊಸಳೆಯ ರಕ್ಷಣೆ

Update: 2021-02-28 13:09 GMT
ಚಿತ್ರ: ಎಎನ್ ಐ

ಹೊಸದಿಲ್ಲಿ:  ಗುಜರಾತಿನ ವಡೋದರದ ಕೆಲಾನ್ ಪುರ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಸ್ಥಳದಿಂದ ಸುಮಾರು 11 ಅಡಿ ಉದ್ದದ ಭಾರಿ ತೂಕದ ಮೊಸಳೆಯನ್ನು ರಕ್ಷಿಸಲಾಗಿದೆ ಎಂದು ಸುದ್ದಿಸಂಸ್ಥೆ ಎ ಎನ್ ಐ ವರದಿ ಮಾಡಿದೆ

ಮೊಸಳೆ ಸುಮಾರು 10ರಿಂದ 11 ಅಡಿ ಉದ್ದವಿದ್ದು. ನಿರ್ಮಾಣಹಂತದ ಕಟ್ಟಡದ ಸ್ಥಳದ ಕಂದಕದ ಕೆಸರಿನಲ್ಲಿ ಪತ್ತೆಯಾಗಿದೆ ಎಂದು ಬಿಲ್ಡರ್ ವೊಬ್ಬರು ನಮಗೆ ಕರೆ ಮಾಡಿದ್ದರು. ನಾವು ಮೊಸಳೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದೇವೆ ಎಂದು ವನ್ಯಜೀವಿ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಅರವಿಂದ್ ಪವಾರ್ ಎ ಎನ್ ಐಗೆ ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿ 11 ಅಡಿ ಉದ್ದದ ಮೊಸಳೆಯನ್ನು ಹಗ್ಗ ಬಳಸಿ, ಜೆಸಿಬಿ ಮೂಲಕ ಆಳವಾದ ಸ್ಥಳದಿಂದ ಮೇಲಕ್ಕೆ ಎತ್ತಿದರು.

ಮೊಸಳೆ ರಕ್ಷಣಾ ಕಾರ್ಯಾಚರಣೆಯ ಚಿತ್ರಗಳನ್ನು ಹಂಚಿಕೊಳ್ಳಲಾಗಿದ್ದು, ಮೊದಲ ಚಿತ್ರದಲ್ಲಿ ಮಣ್ಣಿನ ಕಂದಕದೊಳಗೆ ಸಿಲುಕಿರುವ ಮೊಸಳೆಯನ್ನು ನಿರ್ಮಾಣ ಹಂತದ ಸ್ಥಳದಿಂದ ರಕ್ಷಿಸುವುದನ್ನು ಕಾಣಬಹುದು. ಮುಂದಿನ ಚಿತ್ರದಲ್ಲಿ ಮೊಸಳೆಯು ಪಂಜರದೊಳಗೆ ಹೋಗುತ್ತಿರುವುದನ್ನು ಕಾಣಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News