ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದ ಕೆಲವೇ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗೆ ಕೊರೋನ ಸೋಂಕು ದೃಢ

Update: 2021-03-01 07:11 GMT

ಮುಂಬೈ: ಕೋವಿಡ್-19 ಲಸಿಕೆಯ ಎರಡನೇ ಡೋಸ್ ಅನ್ನು ಕೆಲವೇ  ದಿನಗಳ ಹಿಂದೆ ಪಡೆದಿದ್ದ  ಸಯಾನ್ ಆಸ್ಪತ್ರೆಯ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಎರಡೂ ಡೋಸ್ ತೆಗೆದುಕೊಂಡ ನಂತರವೂ ಸೋಂಕಿನ ವಿರುದ್ಧ  ಪ್ರತಿರೋಧಕ ಶಕ್ತಿ ದೊರೆಯಲು ಹಲವು ದಿನಗಳು ಬೇಕಾಗಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ.

ಈಗ ಕೋವಿಡ್ ಸೋಂಕು ದೃಢಪಟ್ಟಿರುವ ವಿದ್ಯಾರ್ಥಿಗೆ 21 ವರ್ಷ ವಯಸ್ಸಾಗಿದ್ದು ಕಳೆದ ವಾರ ಆತ ಕೋವಿಶೀಲ್ಡ್ ಎರಡನೇ ಡೋಸ್ ಪಡೆದಿದ್ದ. ಕೋವಿಡ್ ಸೋಂಕಿನ ಕೆಲ ಲಘು ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪರೀಕ್ಷೆಗೊಳಗಾದಾಗ ವರದಿ ಪಾಸಿಟಿವ್ ಬಂದಿತ್ತು. ಆತನನ್ನು ಶನಿವಾರ ರಾತ್ರಿ ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಜತೆಗೇ ಲಸಿಕೆ ಪಡೆದಿರುವ ಆತನ ಇತರ ಹಾಸ್ಟೆಲ್ ಸಹಪಾಠಿಗಳನ್ನು ಕ್ವಾರಂಟೈನಿನಲ್ಲಿರಿಸಲಾಗಿದೆ.

ಎರಡು ಡೋಸ್‍ಗಳನ್ನು ಪಡೆದ ಬಳಿಕ ರೋಗ ಪ್ರತಿರೋಧಕ ಶಕ್ತಿ ಬೆಳೆಯಲು ಕನಿಷ್ಠ 45 ದಿನಗಳು ಬೇಕಾಗಬಹುದು ಎಂದು ಸೆವೆನ್ ಹಿಲ್ಸ್ ಆಸ್ಪತ್ರೆಯ ಡಾ ಬಾಲಕೃಷ್ಣ ಅದಸುಲ್ ಹೇಳಿದ್ದಾರೆ. ವಿದ್ಯಾರ್ಥಿ ಎರಡನೇ ಲಸಿಕೆ ಪಡೆದ ಸಮಯದಲ್ಲಿಯೇ ಸೋಂಕಿಗೊಳಗಾಗಿರಬೇಕು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News