ಯುವಕರಿಗೆ ಮೊದಲು ಕೋವಿಡ್ ಲಸಿಕೆ ನೀಡಬೇಕು: ಖರ್ಗೆ

Update: 2021-03-01 16:04 GMT

ಹೊಸದಿಲ್ಲಿ: ಕೋವಿಡ್-19 ಲಸಿಕೆ ನೀಡಿಕೆ ವಿಚಾರದಲ್ಲಿ ಯುವಕರಿಗೆ ಮೊದಲ ಆದ್ಯತೆ ನೀಡಬೇಕು ಎಂದು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಅಭಿಪ್ರಾಯಪಟ್ಟರು.

“ನಾನು 70 ವರ್ಷಕ್ಕಿಂತ ಮೇಲ್ಮಟ್ಟವನು. ನೀವು ಯುವಕರಿಗೆ ಕೋವಿಡ್-19 ಲಸಿಕೆ ನೀಡಬೇಕು ಹಾಗೂ ಅವರ ಜೀವನದ ಆಯುಷ್ಯವನ್ನು ಹೆಚ್ಚಿಸಬೇಕು. ನಾನು ಇನ್ನು 10ರಿಂದ 15 ವರ್ಷ ಬದುಕಬಹುದು. ನಾನು ಕೋವಿಡ್ ಲಸಿಕೆಯನ್ನು ಸ್ವೀಕರಿಸುತ್ತೇನೆ’’ಎಂದು ಈಗ ನಡೆಯುತ್ತಿರುವ 2ನೇ ಹಂತದ ಲಸಿಕೆ ಅಭಿಯಾನದಲ್ಲಿ ಡೋಸ್ ಪಡೆಯುತ್ತೀರಾ? ಎಂಬ ಪ್ರಶ್ನೆಗೆ ಖರ್ಗೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News