×
Ad

ಹರ್ಯಾಣ ಶಾಲೆಯೊಂದರ 54 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

Update: 2021-03-02 17:57 IST

ಹೊಸದಿಲ್ಲಿ: ಹರ್ಯಾಣದ ಕರ್ನಾಲ್ ನ ಶಾಲೆಯೊಂದರ 54 ವಿದ್ಯಾರ್ಥಿಗಳಿಗೆ ಕೊರೋನ ವೈರಸ್ ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಡಿಸೆಂಬರ್ ನಿಂದ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿಗೆ ತೆರಳಲು ಅವಕಾಶ ನೀಡಲಾಗಿತ್ತು.  ಫೆ.24ರಿಂದ 3ರಿಂದ 5ರ ತನಕ ತರಗತಿಯನ್ನು ತೆರೆಯಲಾಗಿತ್ತು.

ಕರ್ನಾಲ್ ನ ಶಾಲೆಯೊಂದರ ಮೂವರು ಮಕ್ಕಳಲ್ಲಿ ಕೊರೋನ ಪಾಸಿಟಿವ್ ಕಂಡು ಬಂದಿತ್ತು. ಆ ನಂತರ ಇನ್ನಷ್ಟು ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದವರ ಪತ್ತೆ ಹಚ್ಚುವಿಕೆ ಹಾಗೂ ಪರೀಕ್ಷೆಗಳ ನಡೆಸಿದ  ಬಳಿಕ ಇನ್ನೂ 54 ವಿದ್ಯಾರ್ಥಿಗಳಿಗೆ ಕೊರೋನ ಪಾಸಿಟಿವ್ ಆಗಿರುವುದು ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆಯ ಹಾಸ್ಟೆಲ್ ಕಟ್ಟಡವನ್ನು ಮುಚ್ಚಲಾಗಿದ್ದು, ಅದನ್ನು ಕಂಟೈನ್ ಮೆಂಟ್ ವಲಯವಾಗಿ ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News