ಹರ್ಯಾಣದಲ್ಲಿ ಖಾಸಗಿ ವಲಯದ ಶೇ.75ರಷ್ಟು ಉದ್ಯೋಗ ಸ್ಥಳೀಯರಿಗೆ ಮೀಸಲು: ಚೌಟಾಲ

Update: 2021-03-02 13:01 GMT

ಚಂಡಿಗಢ: ತಿಂಗಳಿಗೆ 50,000 ರೂ.ವರೆಗಿನ ವೇತನದ ಖಾಸಗಿ ವಲಯದ ಶೇ.75ರಷ್ಟು ಉದ್ಯೋಗಗಳನ್ನು ರಾಜ್ಯದ ಜನರಿಗೆ ಕಾಯ್ದಿರಿಸುವ ಮಸೂದೆಗೆ ಹರ್ಯಾಣದ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ದುಷ್ಯಂತ್ ಸಿಂಗ್ ಚೌಟಾಲ ಮಂಗಳವಾರ ಮಾಹಿತಿ ನೀಡಿದರು. ಈ ಮಸೂದೆಯನ್ನು ಕಳೆದ ವರ್ಷ ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು.

"ಈ ದಿನ ರಾಜ್ಯದ ಯುವಕರಿಗೆ ಬಹಳ ಸಂತೋಷದ ದಿನವಾಗಿದೆ. ರಾಜ್ಯದ ಯುವಕರಿಗೆ ಈಗ ಖಾಸಗಿ ಉದ್ಯೋಗಗಳಲ್ಲಿ ಶೇ.75ರಷ್ಟು ಮೀಸಲಾತಿ ಸಿಗಲಿದೆ. ಅವರು ಪ್ರತಿ ಕಂಪೆನಿ, ಸೊಸೈಟಿ ಹಾಗೂ ಟ್ರಸ್ಟ್ ನಲ್ಲಿ ಮೀಸಲು ಪಡೆಯಲಿದ್ದಾರೆ'' ಎಂದು ಚೌಟಾಲ ಹೇಳಿದರು.

ಸ್ಥಳೀಯರಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಮೀಸಲಾತಿ ಒದಗಿಸುವುದು ಚೌಟಾಲ ನೇತೃತ್ವದ ಜನನಾಯಕ ಜನತಾ ಪಕ್ಷದ ಚುನಾವಣೆಯ ವೇಳೆ ನೀಡಿದ್ದ ಪ್ರಮುಖ ಭರವಸೆಯಾಗಿತ್ತು. 2019ರ ಚುನಾವಣೆಯಲ್ಲಿ 90 ಕ್ಷೇತ್ರಗಳ ಪೈಕಿ 10ರಲ್ಲಿ ಜಯ ಸಾಧಿಸಿರುವ ಜೆಜೆಪಿ ಪಕ್ಷ ಬಿಜೆಪಿ ನೇತೃತ್ವದ ಮೈತ್ರಿ ಸರಕಾರದ ರಚನೆಯಲ್ಲಿ ಮುಖ್ಯ ಪಾತ್ರವಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News