ಮುಂಬೈ: ರೈಲ್ವೇ ಪ್ಲಾಟ್‌ಫಾರ್ಮ್ ಟಿಕೆಟ್ ದರ 5 ಪಟ್ಟು ಹೆಚ್ಚಳ

Update: 2021-03-02 17:14 GMT
ಸಾಂದರ್ಭಿಕ ಚಿತ್ರ

ಮುಂಬೈ, ಮಾ.2: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ, ಮುಂಬರುವ ಬೇಸಿಗೆ ಅವಧಿಯಲ್ಲಿ ಹೆಚ್ಚಿನ ಜನಗಂಗುಳಿಯನ್ನು ನಿವಾರಿಸುವ ಉದ್ದೇಶದಿಂದ ಮುಂಬೈ ಮೆಟ್ರೊಪಾಲಿಟನ್ ಪ್ರದೇಶ ವ್ಯಾಪ್ತಿಯ ಕೆಲವು ಪ್ರಮುಖ ರೈಲ್ವೇ ಸ್ಟೇಷನ್‌ಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು 5 ಪಟ್ಟು ಹೆಚ್ಚಿಸಿರುವುದಾಗಿ ಸೆಂಟ್ರಲ್ ರೈಲ್ವೇ ಘೋಷಿಸಿದೆ. 

ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್, ದಾದರ್, ಲೋಕಮಾನ್ಯ ತಿಲಕ್ ಟರ್ಮಿನಸ್, ನೆರೆಯ ಥಾಣೆ, ಕಲ್ಯಾಣ್, ಪನ್ವೇಲ್ ಮತ್ತು ಭಿವಂಡಿ ರೈಲು ನಿಲ್ದಾಣಗಳ ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು ಈಗಿರುವ 10 ರೂ.ಯಿಂದ 50 ರೂ.ಗೆ ಹೆಚ್ಚಿಸಲಾಗಿದೆ ಎಂದು ಸೆಂಟ್ರಲ್ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಾಜಿ ಸುತರ್ ಹೇಳಿದ್ದಾರೆ. 

ದರ ಹೆಚ್ಚಳ ಫೆ.24ರಿಂದ ಜಾರಿಗೆ ಬಂದಿದ್ದು ಜೂನ್ 15ರವರೆಗೆ ಜಾರಿಯಲ್ಲಿರುತ್ತದೆ. ಫೆಬ್ರವರಿ ದ್ವಿತೀಯ ವಾರದಿಂದ ಮುಂಬೈಯಲ್ಲಿ ದೈನಂದಿನ ಕೊರೋನ ಸೋಂಕು ಪ್ರಕರಣದಲ್ಲಿ ಹೆಚ್ಚಳವಾಗಿದೆ ಎಂದು ಸೆಂಟ್ರಲ್ ರೈಲ್ವೇ ಪ್ರಕಟಣೆ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News