ಸರಕಾರದ ಅಭಿಪ್ರಾಯಕ್ಕಿಂತ ಭಿನ್ನವಾದ ಅಭಿಪ್ರಾಯ ದೇಶದ್ರೋಹವಾಗದು: ಸುಪ್ರೀಂಕೋರ್ಟ್

Update: 2021-03-03 07:56 GMT

ಹೊಸದಿಲ್ಲಿ: ಸರಕಾರದ ಅಭಿಪ್ರಾಯಕ್ಕಿಂತ ಭಿನ್ನವಾದ ಅಭಿಪ್ರಾಯಗಳನ್ನು ‘ದೇಶದ್ರೋಹ ಎಂದು ಕರೆಯಲಾಗುವುದಿಲ್ಲ ಎಂದು ಜಮ್ಮು-ಕಾಶ್ಮೀರ ಸಂಸದ ಫಾರೂಕ್ ಅಬ್ದುಲ್ಲಾ ವಿರುದ್ಧದ ಅರ್ಜಿಯನ್ನು ವಜಾಗೊಳಿಸಿ ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ.

ಸರಕಾರದ ಅಭಿಪ್ರಾಯಕ್ಕಿಂತ ಭಿನ್ನವಾದ ಅಭಿಪ್ರಾಯಗಳ ಅಭಿವ್ಯಕ್ತಿಯನ್ನು ದೇಶದ್ರೋಹ ಎಂದು ಕರೆಯಲಾಗುವುದಿಲ್ಲ ಎಂದು ಉಚ್ಚ ನ್ಯಾಯಾಲಯ ಹೇಳಿದೆ.

2019ರ ಆಗಸ್ಟ್ ನಲ್ಲಿ ರದ್ದುಪಡಿಸಲಾಗಿರುವ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ಕುರಿತು ಫಾರೂಕ್ ಅಬ್ದುಲ್ಲಾ ಅವರು ಭಾರತದ ವಿರುದ್ಧ ಚೀನಾ ಹಾಗೂ ಪಾಕಿಸ್ತಾನದ ಸಹಾಯ ಕೋರಿದ್ದಾರೆ ಎಂಬ ತನ್ನ ಆರೋಪವನ್ನು ದೃಢೀಕರಿಸಲು ವಿಫಲವಾಗಿದ್ದಾಗಿ ಅರ್ಜಿದಾರರು  ಸುಪ್ರೀಂಕೋರ್ಟ್‍ಗೆ ತಿಳಿಸಿದ್ದು, ಅರ್ಜಿದಾರರಿಗೆ 10,000 ರೂ.ದಂಡ ವಿಧಿಸಲಾಗಿದೆ.

370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ರಾಜ್ಯ ಸ್ಥಾನಮಾನವನ್ನು ರದ್ದುಪಡಿಸಿರುವ ಕೇಂದ್ರ ಸರಕಾರದ ಹೆಜ್ಜೆಯ ವಿರುದ್ಧ ನ್ಯಾಶನಲ್ ಕಾನ್ಫರೆನ್ಸ್ ವರಿಷ್ಠ ಫಾರೂಕ್ ಅಬ್ದುಲ್ಲಾ ನೀಡಿರುವ ಹೇಳಿಕೆಯ ವಿರುದ್ಧ ಅರ್ಜಿ ಸಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News