ಕೋಟ್ಯಂತರ ರೂ. ಮರೆಮಾಚಲಾಗಿದೆ: ತಾಪ್ಸಿ, ಅನುರಾಗ್‌ ಕಶ್ಯಪ್‌ ವಿರುದ್ಧದ ಐಟಿ ರೈಡ್‌ ಬಳಿಕ ಅಧಿಕಾರಿಗಳ ಹೇಳಿಕೆ

Update: 2021-03-04 17:40 GMT

ಹೊಸದಿಲ್ಲಿ: ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್, ನಟಿ ತಾಪ್ಸೀ ಪನ್ನು ಮತ್ತು ಇತರರ ವಿರುದ್ಧ ನಡೆಯುತ್ತಿರುವ ಆದಾಯ ತೆರಿಗೆ ದಾಳಿಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮಗಳು ಕಂಡುಬಂದಿವೆ ಎಂದು ಆದಾಯ ತೆರಿಗೆ ಇಲಾಖೆ ಗುರುವಾರ ಹೇಳಿಕೆ ನೀಡಿದ್ದಾಗಿ ndtv.com ವರದಿ ಮಾಡಿದೆ. 

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದುವರೆಗಿನ ಹುಡುಕಾಟದಲ್ಲಿ ತಾಪ್ಸೀ ಪನ್ನು ನಿವಾಸದಿಂದ ತೆರಿಗೆ ವಂಚಿಸಿದ ೫ ಕೋಟಿ ರೂ. ಯ ರಶೀದಿ ಮತ್ತು ಅನುರಾಗ್  ಕಶ್ಯಪ್ ಅವರು ಈ ಹಿಂದೆ ನಡೆಸುತ್ತಿದ್ದ ಪ್ರೊಡಕ್ಷನ್ ಹೌಸ್ ನ 300 ಕೋಟಿ ರೂ. ಕುರಿತಾದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ವಾಟ್ಸಾಪ್ ಚಾಟ್ ಲಾಗ್‌ಗಳು, ಇಮೇಲ್‌ಗಳು, ಡಾಕ್ಯುಮೆಂಟ್‌ಗಳು ಮತ್ತು ಕಂಪ್ಯೂಟರ್ ಗಳನ್ನು ವಿವಿಧ ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಕುರಿತಾದಂತೆ ನಕಾರಾತ್ಮಕ ವಿಮರ್ಶೆ ಮಾಡುತ್ತಿರುವ ಬಾಲಿವುಡ್‌ ತಾರೆಗಳ ವಿರುದ್ಧ ಐಟಿ ದಾಳಿ ನಡೆಸಲಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. 

ಇವರಿಬ್ಬರೂ ಇನ್ನೂ ಆರೋಪಗಳಿಗೆ ಸ್ಪಂದಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News