​ಮತ ಚಲಾಯಿಸದಿದ್ದರೆ ನೀರೂ ಇಲ್ಲ, ವಿದ್ಯುತ್ ಇಲ್ಲ: ಮತದಾರರಿಗೆ ಬೆದರಿಕೆ ಒಡ್ಡಿದ ಬಂಗಾಳದ ಸಚಿವ

Update: 2021-03-07 13:54 GMT
Photo: twitter

ಕೋಲ್ಕತಾ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತನಗೆ ಮತ ಸಿಗದೇ ಇದ್ದರೆ ನೀರು, ವಿದ್ಯುತ್ ವ್ಯವಸ್ಥೆ ಇರುವುದಿಲ್ಲ ಎಂದು ಮತದಾರರಿಗೆ ಪಶ್ಚಿಮಬಂಗಾಳದ ಕೃಷಿ ಸಚಿವ ತಪನ್ ದಾಸ್ ಗುಪ್ತಾ ಬೆದರಿಕೆ ಹಾಕಿದ್ದಾರೆ.

ಹೂಗ್ಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಪ್ತಗ್ರಾಮ ವಿಧಾನಸಭಾ ಚುನಾವಣೆಯ ಟಿಎಂಸಿ ಅಭ್ಯರ್ಥಿ ದಾಸ್ ಗುಪ್ತಾ, ಯಾವ ಪ್ರದೇಶದಲ್ಲಿ ನಾನು  ಮತ ಪಡೆಯುವುದಿಲ್ಲವೋ, ಅಲ್ಲಿನ ನಿವಾಸಿಗರಿಗೆ ವಿದ್ಯುತ್ ಹಾಗೂ ನೀರು ತಲುಪುವುದಿಲ್ಲ.ಅತ್ಯಂತ ಸುಲಭ.  ಅಲ್ಲಿನವರು ಇದಕ್ಕಾಗಿ ಬಿಜೆಪಿಯನ್ನು ಕೇಳಲಿ ಎಂದು ಶನಿವಾರ ನಡೆದ ರ್ಯಾಲಿಯಲ್ಲಿ ದಾಸ್ ಗುಪ್ತಾ ಹೇಳಿದ್ದಾರೆ.

ತಪನ್ ದಾಸ್ ಗುಪ್ತಾ 2011ರಲ್ಲಿ ತನ್ನ ಎದುರಾಳಿ ಎಡರಂಗದ ಅಭ್ಯರ್ಥಿಯನ್ನು ಸೋಲಿಸಿ ಹೂಗ್ಲಿ ಜಿಲ್ಲೆಯಲ್ಲಿರುವ ಸಪ್ತಗ್ರಾಮ ಕ್ಷೇತ್ರವನ್ನು ಗೆದ್ದುಕೊಂಡಿದ್ದರು. 2016ರ ವಿಧಾನಸಭಾ ಚುನಾವಣೆಯಲ್ಲೂ ಸಪ್ತಗ್ರಾಮ ಕ್ಷೇತ್ರವನ್ನು ಗೆದ್ದುಕೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲೂ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News