ಇದಿನಬ್ಬರ ಸ್ಮರಣೆ: ಕಸಾಪಕ್ಕೆ ಹೊಣೆಯಿಲ್ಲವೇ?

Update: 2021-03-07 17:47 GMT

ಮಾನ್ಯರೇ,

ಇತ್ತೀಚೆಗೆ ಬ್ಯಾರಿ ಸಾಹಿತ್ಯ ಅಕಾಡಮಿಯು ಬಿ.ಎಂ.ಇದಿನಬ್ಬರ ಶತಮಾನೋತ್ಸವ ಆಚರಿಸಿರುವುದು ಅಭಿನಂದನೀಯ. ಆದರೆ ಇದಿನಬ್ಬರು ನಾಡಿನಾದ್ಯಂತ ಗುರುತಿಸಿಕೊಂಡಿರುವುದು ಕನ್ನಡದ ಕಟ್ಟಾಳು ಎಂಬುದಾಗಿ. ಇದಿನಬ್ಬರ ಮೂಲಕ ಮುಸ್ಲಿಂ ಸಮುದಾಯದೊಳಗೂ ಕನ್ನಡದ ಕಂಪು ಹರಡಿತು. ಮದ್ರಾಸದಲ್ಲಿ ಕನ್ನಡ ಮಾಧ್ಯಮವನ್ನು ಅನುಷ್ಠಾನಗೊಳಿಸುವ ಕನಸನ್ನು ಇದಿನಬ್ಬರು ಕಂಡಿದ್ದರು. ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರರಂತಹ ಕನ್ನಡ ಸಂಘಟಕರ ಜೊತೆಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಆದುದರಿಂದ ಇದಿನಬ್ಬರನ್ನು ನೆನಪಿಸುವ ಹೊಣೆಗಾರಿಕೆ ಕನ್ನಡ ಸಾಹಿತ್ಯ ಪರಿಷತ್ತಿಗೂ ಇದೆ. ಈ ನಿಟ್ಟಿನಲ್ಲಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೂಡ ಇದಿನಬ್ಬರ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅತ್ಯಗತ್ಯವಾಗಿದೆ. ಇದಿನಬ್ಬರು ಕೇವಲ ಉಳ್ಳಾಲಕ್ಕೆ ಅಥವಾ ಬ್ಯಾರಿ ಸಮುದಾಯಕ್ಕೆ ಸೀಮಿತವಾದವರಲ್ಲ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಧ್ವನಿಯೆತ್ತಿದವರಲ್ಲಿ ಇದಿನಬ್ಬರು ಅಗ್ರಗಣ್ಯರು. ಜೊತೆಗೆ ಅವರು ಕೇವಲ ಕಾಂಗ್ರೆಸ್ ಪಕ್ಷಕ್ಕೂ ಸೀಮಿತವಾಗಿ ಉಳಿದಿರಲಿಲ್ಲ. ಎಲ್ಲ ಪಕ್ಷದ ಹಿರಿಯರೂ ಇದಿನಬ್ಬರನ್ನು ಗೌರವಿಸುತ್ತಿದ್ದರು. ಈ ನಿಟ್ಟಿನಲ್ಲಿ, ಸದ್ಯದ ಸರಕಾರ ಇದಿನಬ್ಬರ ಸ್ಮರಣಾರ್ಥ ಯಾವುದಾದರೊಂದು ಕನ್ನಡಪರ ಯೋಜನೆಯನ್ನು ರೂಪಿಸಬಹುದಾಗಿದೆ.  

Writer - ಉಷಾ ರೈ, ಬಾಯಾರು

contributor

Editor - ಉಷಾ ರೈ, ಬಾಯಾರು

contributor

Similar News