ಪಶ್ಚಿಮಬಂಗಾಳ ಚುನಾವಣೆ: ಮಿಥುನ್ ಚಕ್ರವರ್ತಿಗೆ ‘ವೈ ಪ್ಲಸ್’ ಭದ್ರತೆ

Update: 2021-03-11 05:55 GMT

ಹೊಸದಿಲ್ಲಿ: ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿರುವ ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಕೇಂದ್ರ ಸರಕಾರವು 'ವೈ ಪ್ಲಸ್' ಭದ್ರತೆಯನ್ನು ಒದಗಿಸಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.

ವಿಶೇಷ ಭದ್ರತಾ ಗುಂಪು(ಎಸ್ ಎಸ್ ಜಿ)ಎಂದು ಕರೆಯಲ್ಪಡುವ ಈ ಕೆಲಸಕ್ಕಾಗಿ ಮೀಸಲಾಗಿರುವ ವಿಭಾಗವನ್ನು ಹೊಂದಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐ ಎಸ್ ಎಫ್)ಭದ್ರತಾ ರಕ್ಷಣೆಯನ್ನು ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ.

ಕೋಲ್ಕತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಗಾ ರ್ಯಾಲಿಯಲ್ಲಿ 70 ವರ್ಷದ ನಟ ರವಿವಾರ ಬಿಜೆಪಿಗೆ ಸೇರಿದ್ದರು.

ಮಿಥುನ್‍ಗೆ 'ವೈ ಪ್ಲಸ್’ ಭದ್ರತೆ ನೀಡಲಾಗಿದೆ ಹಾಗೂ ಪಶ್ಚಿಮಬಂಗಾಳ ಚುನಾವಣೆ ಪ್ರಚಾರದ ಸಮಯದಲ್ಲಿ ಸಶಸ್ತ್ರ, ಸಿಐಎಸ್ ಎಫ್ ಕಮಾಂಡೋಗಳು ಅವರೊಂದಿಗೆ ಹೋಗುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News