ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್‍ಗೆ ಢಿಕ್ಕಿಯಾದ ಕಾರು; 8 ಮಂದಿ ಮೃತ್ಯು, ಮೂವರಿಗೆ ಗಾಯ

Update: 2021-03-11 06:54 GMT

ಲಕ್ನೊ: ಆಗ್ರಾ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ ಕಾರೊಂದು ಟ್ರಕ್ ಗೆ ಢಿಕ್ಕಿಯಾದ ಪರಿಣಾಮವಾಗಿ 8 ಮಂದಿ ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ರಸ್ತೆ ಅಪಘಾತವು ರಾಷ್ಟ್ರೀಯ ಹೆದ್ದಾರಿ-2ರಲ್ಲಿ ಬೆಳಗ್ಗೆ 5:15ರ ಸುಮಾರಿಗೆ ನಡೆದಿದ್ದು, ಎಸ್ ಯುವಿ ಚಾಲಕ ಕಾರಿನ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ವರದಿಗಳು ತಿಳಿಸಿವೆ.

ವರದಿಯ ಪ್ರಕಾರ ಸ್ಕಾರ್ಪಿಯೋ ಕಾರಿನಲ್ಲಿ 12 ಮಂದಿ ಪ್ರಯಾಣಿಸುತ್ತಿದ್ದರು. ಕಾರು ಎಟ್ಮಾಡ್ಪುರ ಕಡೆಯಿಂದ ಪ್ರಯಾಣಿಸುತ್ತಿತ್ತು. ರಸ್ತೆಯ ಲೈನ್ ನಿಂದ ಹಾರಿದ ಕಾರು ಆಗ್ರಾದಿಂದ ಬರುತ್ತಿದ್ದ ಕಂಟೈನರ್ ಟ್ರಕ್ ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿತು. ಆದರೆ ಅತ್ಯಂತ ವೇಗದಿಂದಾಗಿ ನಿಯಂತ್ರಣ ಕಳೆದುಕೊಂಡಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News