×
Ad

ನನ್ನ ತಾಯಿ ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ, ಪ್ರತಿಯೊಬ್ಬರೂ ವ್ಯಾಕ್ಸಿನ್ ಪಡೆಯಬೇಕು ಎಂದ ಪ್ರಧಾನಿ ಮೋದಿ

Update: 2021-03-11 15:32 IST

ಹೊಸದಿಲ್ಲಿ: ನನ್ನ ತಾಯಿ ಹೀರಾ ಬೆನ್ ಕೋವಿಡ್-19 ಲಸಿಕೆಯ ಮೊದಲ ಡೋಸ್ ಅನ್ನು ಗುರುವಾರ ಸ್ವೀಕರಿಸಿದ್ದಾರೆ ಎಂದು ಹೇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಪ್ರತಿಯೊಬ್ಬರೂ ಲಸಿಕೆಯನ್ನು ಸ್ವೀಕರಿಸಬೇಕು. ಅರ್ಹ ಜನರಿಗೆ ಲಸಿಕೆ ಪಡೆಯಲು ಉತ್ತೇಜನ ನೀಡಬೇಕೆಂದು  ವಿನಂತಿಸಿಕೊಂಡಿದ್ದಾರೆ.

ಇಂದು ನನ್ನ ತಾಯಿ ಕೋವಿಡ್-19 ಲಸಿಕೆ ಸ್ವೀಕರಿಸಿದ್ದಾರೆ ಎಂಬ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಅರ್ಹರು ಲಸಿಕೆ ಪಡೆಯುವಂತೆ ಸಹಾಯ ಮಾಡುವ ಜೊತೆಗೆ ಉತ್ತೇಜನ ನೀಡಬೇಕೆಂದು ಪ್ರಧಾನಿ ಮೋದಿ ಇಂದು ಟ್ವೀಟಿಸಿದರು.

ಎರಡನೇ ಹಂತದ ಲಸಿಕೆ ನೀಡಿಕೆಯಲ್ಲಿ 60 ವರ್ಷಕ್ಕಿಂತ ಮೇಲ್ಮಟ್ಟ ಹಾಗೂ 45 ವರ್ಷಕ್ಕಿಂತ ಮೇಲ್ಮಟ್ಟ ಇತರ ಕಾಯಿಲೆ ಪೀಡಿತರಿಗೆ ಲಸಿಕೆ ನೀಡಲಾಗುತ್ತಿದೆ.
ಎರಡನೇ ಹಂತದ ಮೊದಲ ದಿನವಾಗಿರುವ ಮಾ.1ರಂದು ಏಮ್ಸ್ ಆಸ್ಪತ್ರೆಯಲ್ಲಿ 71ರ ವಯಸ್ಸಿನ ಮೋದಿ ಕೊರೋನ ಲಸಿಕೆ ಸ್ವೀಕರಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News