ಲ್ಯಾಪ್‍ಟಾಪ್ ಹ್ಯಾಕ್ ಮಾಡಲಾಗಿರುವ ಕುರಿತು ಸಿಟ್ ತನಿಖೆ ಕೋರಿ ಬಾಂಬೆ ಹೈಕೋರ್ಟ್ ಕದ ತಟ್ಟಿದ ರೋನಾ ವಿಲ್ಸನ್

Update: 2021-03-11 11:12 GMT
 photo: youtube

ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿದ್ದ ಮೊದಲ ವ್ಯಕ್ತಿಯಾಗಿದ್ದ ಸಂಶೋಧಕ ರೋನಾ ವಿಲ್ಸನ್ ಅವರು ಬುಧವಾರ  ಬಾಂಬೆ ಹೈಕೋರ್ಟಿನ ಕದ ತಟ್ಟಿದ್ದಾರೆ. ಸುಮಾರು 22 ತಿಂಗಳುಗಳ ಅವಧಿಯಲ್ಲಿ ತಮ್ಮ ಲ್ಯಾಪ್ ಟಾಪ್ ಅನ್ನು ಹ್ಯಾಕ್  ಮಾಡಿ ಅದರಲ್ಲಿ ತಮ್ಮ ಮೇಲೆ ಅನಗತ್ಯ ಸುಳ್ಳು ಆರೋಪಗಳನ್ನು  ಹೊರಿಸಲು ಪೂರಕವಾಗುವ ದಾಖಲೆಗಳನ್ನು ಇರಿಸಲಾಗಿದೆ ಎಂಬ ಕುರಿತಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಪ್ರಮುಖವಾಗಿ ಪ್ರಧಾನಿಯನ್ನು ಹತ್ಯೆಗೈದು ಸರಕಾರವನ್ನು ಬೀಳಿಸಲು ಸಂಚು ಹೂಡಿದ್ದಾರೆಂಬುದನ್ನು ತಿಳಿಸುವ ಪತ್ರಗಳು ದೊರಕಿದೆ ಎಂದು ಹೇಳಿಕೊಂಡು ವಿಲ್ಸನ್ ಸಹಿತ 15 ಮಂದಿ ಹೋರಾಟಗಾರರ ವಿರುದ್ಧ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆ ಹೇರಲಾಗಿತ್ತು.

ವಿಲ್ಸನ್ ಅವರ ಬಂಧನ ನಡೆಯುವುದಕ್ಕಿಂತ ಎರಡು ವರ್ಷಗಳ ಹಿಂದೆ ಕಂಪ್ಯೂಟರ್‍ನಲ್ಲಿ ಜೂನ್ 13, 2016ರಂದು ಕಳುಹಿಸಲಾಗಿದ್ದ ಇಮೇಲ್ ಮೂಲಕ ನೆಟ್‍ವೈರ್ ಎಂಬ ಮಾಲ್ವೇರ್ ಅಳವಡಿಸಲಾಗಿತ್ತು ಎಂದು ಅಮೆರಿಕಾದ ಆರ್ಸೆನೆಲ್ ಕನ್ಸಲ್ಟಿಂಗ್ ಸಂಸ್ಥೆ ತನ್ನ  ಇತ್ತೀಚಿಗಿನ ವರದಿಯಲ್ಲಿ   ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ವಿಲ್ಸನ್ ಅವರ ಕಂಪ್ಯೂಟರ್ ನ `ಆರ್‍ಬ್ಯಾಕಪ್'  ಎಂಬ ಹಿಡನ್ ಫೋಲ್ಡರ್ ನಲ್ಲಿ  52 ದಾಖಲೆಗಳನ್ನಿರಿಸಲಾಗಿತ್ತು ಹಾಗೂ ವಿಲ್ಸನ್ ಅವರ ನಿವಾಸ ಮತ್ತು ಲ್ಯಾಪ್‍ಟಾಪ್ ಅನ್ನು ಜೂನ್ 6, 2018ರಂದು ವಶಪಡಿಸಿಕೊಳ್ಳಲಾಗಿತ್ತು. ಅದರ ಮುನ್ನಾ ದಿನ ಇಂತಹ ದಾಖಲೆಯನ್ನು ಕಂಪ್ಯೂಟರ್ ನಲ್ಲಿ ಸೇರಿಸಲಾಗಿತ್ತು ಎಂದು ವರದಿ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News