×
Ad

ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಮಲಹಾಸನ್ ಸ್ಪರ್ಧಾಕಣಕ್ಕೆ

Update: 2021-03-12 17:58 IST

ಚೆನ್ನೈ: ಹಿರಿಯ ಚಲನಚಿತ್ರ ನಟ ಹಾಗೂ ಮಕ್ಕಳ್ ನೀಧಿ ಮೈಯಮ್ (ಎಂಎನ್ ಎಂ)ಸ್ಥಾಪಕ ಕಮಲ ಹಾಸನ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಾ ಕಣಕ್ಕಿಳಿಯಲಿದ್ದಾರೆ.

ತನ್ನ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ ಕಮಲಹಾಸನ್ ಈ ಘೋಷಣೆ ಮಾಡಿದರು.

ಕಳೆದ ಎರಡು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಎಐಎಡಿಎಂಕೆ ಪಕ್ಷ ಗೆಲುವು ಸಾಧಿಸಿತ್ತು. ಹೊಸ ಸೀಟು ಹಂಚಿಕೆಯ ಒಪ್ಪಂದ ಪ್ರಕಾರ ಆಡಳಿತ ಪಕ್ಷ ಎಐಎಡಿಎಂಕೆ ತನ್ನ ಮೈತ್ರಿಪಕ್ಷ ಬಿಜೆಪಿಗೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು, ಇದು ಎಐಎಡಿಎಂಕೆ ಕಾರ್ಯಕರ್ತರಿಗೆ ನೋವುಂಟು ಮಾಡಿದೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಎಂಎನ್ ಎಂ ಪಕ್ಷ ಶೇ.11ರಷ್ಟು ಮತ ಗಳಿಸಿತ್ತು.

"ನಾನು ಐಎಎಸ್ ಅಧಿಕಾರಿಯಾಗಬೇಕೆನ್ನುವುದು ನನ್ನ ತಂದೆಯ ಕನಸಾಗಿತ್ತು. ನಾನು ಅವರ ಕನಸನ್ನು ಈಡೇರಿಸಲಿಲ್ಲ. ನನ್ನ ಪಕ್ಷ ಹಲವು ಮಾಜಿ ಐಎಎಸ್ ಅಧಿಕಾರಿಗಳನ್ನು ಒಳಗೊಂಡಿದೆ. ಇದು ನನಗೆ ಹೆಮ್ಮೆಯ ಕ್ಷಣ''ಎಂದು ಸುದ್ದಿಗಾರರಿಗೆ ಹಸನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News