ಪೆಟ್ರೋಲ್‌ 5ರೂ., ಡೀಸೆಲ್‌ 4ರೂ. ಕಡಿತ, 12 ತಿಂಗಳ ಹೆರಿಗೆ ರಜೆ: ಡಿಎಂಕೆ ಪ್ರಣಾಳಿಕೆಯಲ್ಲಿ ಭರವಸೆ

Update: 2021-03-13 08:36 GMT

ಚೆನ್ನೈ: ಮುಂಬರುವ ತಮಿಳುನಾಡು ಚುನಾವಣೆಯ ಹಿನ್ನೆಲೆಯಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ,ಸ್ಟಾಲಿನ್ ಶನಿವಾರ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಕಡಿತ ಮಾಡುವುದಾಗಿ ಭರವಸೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಎಂಕೆ ಪ್ರಣಾಳಿಕೆಯನ್ನು ಓದಿದ ಸ್ಟಾಲಿನ್, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಲೀಟರ್ ಗೆ  ಕ್ರಮವಾಗಿ 5 ರೂ. ಹಾಗೂ 4 ರೂ.ಕಡಿತಗೊಳಿಸಲಾಗುವುದು. ಎಲ್ ಪಿಜಿ  ಅನಿಲ ಸಿಲಿಂಡರ್ ಗೆ 100 ರೂ.ಸಬ್ಸಿಡಿ ನೀಡುವುದಾಗಿ ಭರವಸೆ ನೀಡಿದರು.

ಆವಿನ್ ಹಾಲಿನ ಬೆಲೆ 3 ರೂ.ಕಡಿತ, ರಾಜ್ಯದಲ್ಲಿ ಆಸ್ತಿ ತೆರಿಗೆ ಹೆಚ್ಚಳವಿಲ್ಲ, ರೇಶನ್ ಅಕ್ಕಿ ಕಾರ್ಡ್‍ದಾರರಿಗೆ 4,000 ರೂ.ಒದಗಿಸಲಾಗುವುದು, ಮಹಿಳೆಯರಿಗೆ ಹೆರಿಗೆ ರಜೆಯನ್ನು 12 ತಿಂಗಳಿಗೆ ವಿಸ್ತರಣೆ, ಮೊದಲ ವಿಧಾನಸಭಾ ಅಧಿವೇಶನದಲ್ಲಿ ನೀಟ್ ಹಿಂಪಡೆಯುವ ಕುರಿತು  ಕಾನೂನು ಅಂಗೀಕಾರ ಸಹಿತ 500 ಭರವಸೆಗಳನ್ನು ಡಿಎಂಕೆ ತನ್ನ ಪ್ರಣಾಳಿಕೆಯನ್ನು ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News