×
Ad

ಅರ್ಹತಾ ಪರೀಕ್ಷೆ ಬರೆಯಲು ಬೇರೊಬ್ಬನನ್ನು ಕಳುಹಿಸಿ ಪೊಲೀಸರ ಅತಿಥಿಯಾದ ಎಂಬಿಬಿಎಸ್ ಪದವೀಧರ

Update: 2021-03-13 15:31 IST

ಹೊಸದಿಲ್ಲಿ: ಭಾರತದಲ್ಲಿ ಪ್ರಾಕ್ಟೀಸ್ ನಡೆಸಲು ಅರ್ಹರನ್ನಾಗಿ ಮಾಡುವ ಪರೀಕ್ಷೆಯಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಪರೀಕ್ಷೆಗೆ ಹಾಜರಾಗುವಂತೆ ಮಾಡಿದ ಆರೋಪದ ಮೇಲೆ ತಜಕಿಸ್ತಾನದಿಂದ ಎಂಬಿಬಿಎಸ್ ಪದವಿ ಪಡದಿರುವ 35 ವರ್ಷದ ವ್ಯಕ್ತಿಯನ್ನು ದಿಲ್ಲಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಆರೋಪಿಯನ್ನು ರಾಜಸ್ತಾನದ ಪಾಲಿ ಜಿಲ್ಲೆಯ ನಿವಾಸಿ ಮನೋಹರ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 
ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್ ಬಿಇ)ನಡೆಸಿದ ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆಗೆ (ಎಫ್ ಎಂಜಿಇ) ಮನೋಹರ್ ಸಿಂಗ್ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇತರ ದೇಶಗಳಿಂದ ಪ್ರಾಥಮಿಕ ವೈದ್ಯಕೀಯ ಅರ್ಹತೆಯನ್ನು ಪೂರ್ಣಗೊಳಿಸಿದ ಭಾರತೀಯರಿಗೆ ಅಥವಾ ಭಾರತದ ಸಾಗರೋತ್ತರ ನಾಗರಿಕರಿಗೆ ಇದು ಪರವಾನಗಿ ಪರೀಕ್ಷೆಯಾಗಿದೆ ಎಂದು ಅವರು ಹೇಳಿದರು.

ಕೊನೆಯ ಎಫ್ ಎಂಜಿಇ ಸ್ಟ್ರೀನಿಂಗ್ ಪರೀಕ್ಷೆಯನ್ನು ಡಿಸೆಂಬರ್ 4, 2020ರಂದು ನಡೆಸಲಾಯಿತು. ಮನೋಹರ್ ಸಿಂಗ್ ಅವರಿಗೆ ಮಥುರಾ ರಸ್ತೆಯಲ್ಲಿರುವ ಪರೀಕ್ಷಾ ಕೇಂದ್ರವನ್ನು ನೀಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅರ್ಜಿ ನಮೂನೆಯಲ್ಲಿರುವ ಫೋಟೊ ಹಾಗೂ ಪರೀಕ್ಷೆಯ ದಿನದಂದು ತೆಗೆದ ಫೋಟೊಗಳ ನಡುವೆ ಹೊಂದಿಕೆಯಾಗದ ಕಾರಣ ಆರೋಪಿಯ ಫಲಿತಾಂಶವನ್ನು ಸ್ಥಗಿತಗೊಳಿಸಲಾಗಿದೆ. ಫೆ.3ರಂದು ಫೇಸ್ ಐಡಿ ಪರಿಶೀಲನೆಗಾಗಿ ಅವರನ್ನು ಕರೆಯಲಾಗಿತ್ತು. ಆದರೆ ಅವರು ಬಂದಿರಲಿಲ್ಲ ಎಂದು ಅವರು ಹೇಳಿದರು.

ಬುಧವಾರ ಮನೋಹರ್ ಸಿಂಗ್ ಅವರು ಫೇಸ್ ಐಡಿ ಪರಿಶೀಲನೆಗಾಗಿ ಎನ್ ಬಿಇಗೆ ಭೇಟಿ ನೀಡಿದರು. ಪರೀಕ್ಷೆಯ ದಿನದಂದು ತೆಗೆದ ಫೋಟೊದೊಂದಿಗೆ ತಂಡವು ಫೇಸ್ ಐಡಿಯನ್ನು ಪರಿಶೀಲಿಸಿದಾಗ ಅದು ಹೊಂದಿಕೆಯಾಗಲಿಲ್ಲ ಎಂದು ಉಪ ಪೊಲೀಸ್ ಆಯುಕ್ತ ಆರ್ .ಪಿ. ಮೀನಾ ಹೇಳಿದ್ದಾರೆ.

ನಂತರ ಮನೋಹರ್ ಅವರು ಪ್ರಶ್ನೆಗೆ ತಪ್ಪಾಗಿ ಉತ್ತರಿಸಿದರು. ಇದು ಅನುಮಾನವನ್ನು ಹುಟ್ಟುಹಾಕಿತು. ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಮನೋಹರ್ ಸಿಂಗ್ ಅವರನ್ನು

ಬಂಧಿಸಲಾಗಿದ್ದು, ಅವರ ಪ್ರವೇಶ ಪತ್ರ, ಎಂಬಿಬಿಎಸ್ ಪದವಿ ಹಾಗೂ ಅರ್ಜಿ ನಮೂನೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರ್.ಪಿ. ಮೀನಾ ತಿಳಿಸಿದ್ದಾರೆ.

ವಿಚಾರಣೆಯ ವೇಳೆ ತಾನು ತಜಕಿಸ್ತಾನದಿಂದ ಎಂಬಿಬಿಎಸ್ ಪದವಿ ಪಡೆದಿದ್ದೇನೆ ಹಾಗೂ ಕಳೆದ ಆರು ವರ್ಷಗಳಿಂದ ಎಫ್ ಎಂಜಿಇ ಪಾಸ್ ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News