×
Ad

ಡೆಹ್ರಾಡೂನ್-ದಿಲ್ಲಿ ಶತಾಬ್ದಿ ಎಕ್ಸ್ ಪ್ರೆಸ್ ಬೋಗಿಯಲ್ಲಿ ಬೆಂಕಿ

Update: 2021-03-13 15:47 IST

Photo source: Twitter(@ani)

ಹೊಸದಿಲ್ಲಿ: ಡೆಹ್ರಾಡೂನ್-ದಿಲ್ಲಿ ಶತಾಬ್ದಿ ಎಕ್ಸ್ ಪ್ರೆಸ್ ಬೋಗಿಯೊಂದರಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ರೈಲ್ವೆ ತಿಳಿಸಿದೆ.

ಬೋಗಿ ಸಿ5ನಲ್ಲಿ ಶಾರ್ಟ್ ಸಕ್ರ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ಹೊತ್ತಿಕೊಂಡಿದ್ದ ಕೋಚ್ ಅನ್ನು ಬೇರ್ಪಡಿಸಲಾಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಗಾರ್ಡ್ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಕೋಚ್ ನಲ್ಲಿದ್ದ ಒಟ್ಟು 35 ಪ್ರಯಾಣಿಕರನ್ನು ಇತರ ಬೋಗಿಗಳಿಗೆ ಸ್ಥಳಾಂತರಿಸಲಾಗಿದೆ ಹಾಗೂ ಹೊಂದಿಸಲಾಗಿದೆ. ರೈಲು ಗಮ್ಯಸ್ಥಾನಕ್ಕೆ ಹೊರಟಿದೆ ಎಂದು ರೈಲ್ವೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News