×
Ad

ಮಾಸ್ಕ್ ಧರಿಸದ ಪ್ರಯಾಣಿಕರಿಗೆ ವಿಮಾನ ನಿಲ್ದಾಣ ಪ್ರವೇಶ ನಿರಾಕರಿಸಿ: ಡಿಜಿಸಿಎ ನಿರ್ದೇಶನ

Update: 2021-03-13 17:46 IST

ಹೊಸದಿಲ್ಲಿ: ಮಾಸ್ಕ್ ಧರಿಸದ ಪ್ರಯಾಣಿಕರಿಗೆ ವಿಮಾನ ನಿಲ್ದಾಣ ಪ್ರವೇಶವನ್ನು ನಿರಾಕರಿಸುವಂತೆ ನಾಗರಿಕ ವಿಮಾನ ಯಾನ ನಿರ್ದೇಶನಾಲಯ(ಡಿಜಿಸಿಎ)ಶನಿವಾರ  ಭದ್ರತಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ಇತ್ತೀಚೆಗಿನ ಮಾರ್ಗಸೂಚಿಗಳ ಪ್ರಕಾರ ಹೊರಡುವ ಮೊದಲು ಮಾಸ್ಕ್ ಧರಿಸಲು ನಿರಾಕರಿಸುವ ಪ್ರಯಾಣಿಕರನ್ನು ವಿಮಾನದಿಂದ ಹೊರ ಹಾಕಲಾಗುತ್ತದೆ.

ಪದೇ ಪದೇ ಎಚ್ಚರಿಕೆ ನೀಡಿದ ಹೊರತಾಗಿಯೂ ಕೋವಿಡ್-19 ಶಿಷ್ಟಾಚಾರದ ಪ್ರಕಾರ ಪ್ರಯಾಣಿಕರು ಮಾಸ್ಕ್ ಧರಿಸದೇ ಇರುವುದು , ಸರಿಯಾಗಿ ಮಾಸ್ಕ್ ಧರಿಸದೇ ಇದ್ದರೆ ಅದನ್ನು ಅಶಿಸ್ತು ಎಂದು ಪರಿಗಣಿಸಲಾಗುತ್ತದೆ.

 ಒಂದು ವೇಳೆ ಯಾವುದೇ ಪ್ರಯಾಣಿಕ ಕೋವಿಡ್ 19 ಶಿಷ್ಟಾಚಾರ(ಸರಿಯಾಗಿ ಮಾಸ್ಕ್ ಧರಿಸದೇ ಇರುವುದು, ಸುರಕ್ಷಿತ ಅಂತರ ನಿಯಮ ಪಾಲಿಸದೇ ಇರುವುದು ಸೇರಿದಂತೆ)ಪಾಲಿಸದೇ ಇದ್ದರೆ ಅವರಿಗೆ ಸೂಕ್ತ ಎಚ್ಚರಿಕೆಗಳನ್ನು ನೀಡಿ ಭದ್ರತಾ ಏಜೆನ್ಸಿಗಳಿಗೆ ಹಸ್ತಾಂತರಿಸಬೇಕು. ಅಗತ್ಯವಿದ್ದರೆ ಅವುಗಳನ್ನು ಕಾನೂನು ಪ್ರಕಾರ ವ್ಯವಹರಿಸಬಹುದು ಎಂದು ವಾಯುಯಾನ ನಿಯಂತ್ರಕ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News