ಮಹಾರಾಷ್ಟ್ರ: ಸತತ ಎರಡನೇ ದಿನ 15,000ಕ್ಕೂ ಅಧಿಕ ಪ್ರಕರಣ

Update: 2021-03-13 15:32 GMT

ಹೊಸದಿಲ್ಲಿ: ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಹೊಸತಾಗಿ ನಿರ್ಬಂಧಗಳನ್ನು ಹೇರಿದ ಹೊರತಾಗಿಯೂ ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿ ಬಿಗಡಾಯಿಸಿದ್ದು, ಸತತ ಎರಡನೇ ದಿನ 15,000ಕ್ಕೂ ಅಧಿಕ ಕೇಸ್ ಗಳು ವರದಿಯಾಗಿವೆ.

ಶನಿವಾರ ಮಹಾರಾಷ್ಟ್ರದಲ್ಲಿ 15,602 ಹೊಸ ಕೊರೋನ ವೈರಸ್ ಕೇಸ್ ಗಳು ವರದಿಯಾಗಿವೆ. 88 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾಜ್ಯದಲ್ಲಿ 15,800 ಹೊಸ ಕೇಸ್ ಗಳು ವರದಿಯಾಗಿದ್ದವು. ಕಳೆದ ವರ್ಷದ ಅಕ್ಟೋಬರ್ ಬಳಿಕ ಇದು ಗರಿಷ್ಠ ದೈನಂದಿನ ಪ್ರಕರಣವಾಗಿದೆ.

ಒಟ್ಟಾರೆ ಮಹಾರಾಷ್ಟ್ರದಲ್ಲಿ 2.3 ಮಿಲಿಯನ್ ಕೊರೋನ ವೈರಸ್ ಕೇಸ್ ಗಳು ವರದಿಯಾಗಿದ್ದು ಈಗ ರಾಜ್ಯದಲ್ಲಿ ಮತ್ತೆ ಕೊರೋನ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಈ ರಾಜ್ಯವು ದೇಶದಲ್ಲಿ ಅತ್ಯಂತ ಹೆಚ್ಚು ಕೊರೋನ ಪೀಡಿತವಾಗಿದೆ.

ಕೊರೋನ ವೈರಸ್ ನ್ನು ನಿಯಂತ್ರಿಸಲು ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News