ನಟ ವಿಜಯಕಾಂತ್ ನಿರ್ಗಮನ ಮೈತ್ರಿಕೂಟದ ಅವಕಾಶಕ್ಕೆ ಧಕ್ಕೆಯಾಗದು: ತಮಿಳುನಾಡು ಬಿಜೆಪಿ
ಹೊಸದಿಲ್ಲಿ: ನಟ ವಿಜಯಕಾಂತ್ ನೇತೃತ್ವದ ಡಿಎಂಡಿಕೆ ಪಕ್ಷವು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಮುಂದಾಳತ್ವದ ಮೈತ್ರಿಕೂಟದಿಂದ ನಿರ್ಗಮಿಸಿರುವುದು ಮೈತ್ರಿಕೂಟದ ಗೆಲುವಿನ ಅವಕಾಶದ ಮೇಲೆ ಯಾವುದೇ ಪರಿಣಾಮಬೀರದು ಎಂದು ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಎಲ್. ಮುರುಗನ್ ಹೇಳಿದ್ದಾರೆ.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ(ಸಿಇಸಿ)ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುರುಗನ್, ನಾವು ಸಿಇಸಿಗೆ ನಮ್ಮ ಹಿತಾಸಕ್ತಿಯ ಕುರಿತಾಗಿ ಮಾಹಿತಿ ನೀಡಿದ್ದೇವೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದರು.
ಡಿಎಂಡಿಕೆ ಮೈತ್ರಿಕೂಟದಿಂದ ನಿರ್ಗಮಿಸಿರುವ ಕುರಿತಾಗಿ ಕೇಳಿದಾಗ, ಎಐಎಡಿಎಂಕೆ ಮೈತ್ರಿಕೂಟದ ನಾಯಕತ್ವವಹಿಸಿದ್ದು, ನಾವು ಮೈತ್ರಿಕೂಟದ ಕಿರಿಯ ಮೈತ್ರಿಪಕ್ಷವಾಗಿದ್ದೇವೆ. ಮೈತ್ರಿಕೂಟವನ್ನು ತ್ಯಜಿಸಿರುವ ಪಕ್ಷ ಎಐಎಡಿಎಂಕೆಯೊಂದಿಗೆ ಚರ್ಚಿಸಿವೆ. ಏನು ಚರ್ಚಿಸುವೆ ಎಂದು ಗೊತ್ತಿಲ್ಲ. ಎಐಎಡಿಎಂಕೆ ನಿರ್ಧಾರವನ್ನುನಾವು ಸ್ವಾಗತಿಸುತ್ತೇವೆ. ಮೈತ್ರಿಪಕ್ಷ ಮೈತ್ರಿಕೂಟ ತ್ಯಜಿಸಿದರೆ, ನಮ್ಮ ಗೆಲುವಿನ ಅವಕಾಶದ ಮೇಲೆ ಪರಿಣಾಮಬೀರುವುದಿಲ್ಲ.ನಾವು ಗೆಲ್ಲುತ್ತೇವೆ. ಸರಕಾರ ರಚಿಸುತ್ತೇವೆ ಎಂದು ಮುರುಗನ್ ಹೇಳಿದ್ದಾರೆ.